ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರಿನ ಈ ಭಾಗದಲ್ಲಿ ನಾಳೆ ನೀರು ಪೂರೈಕೆಯಲ್ಲಿ ವ್ಯತ್ಯಯ..

ಬೆಂಗಳೂರು: ಆಗಸ್ಟ್ 31 ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ನಗರದ ಕೆಲವು ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ತುರ್ತು ಕಾಮಗಾರಿ ಹಿನ್ನಲೆಯಲ್ಲಿ ಶಾಂತಲಾ ನಗರ, ಶಾಂತಿ ನಗರ, ವಿನಾಯಕ ನಗರ, ಆನೆಪಾಳ್ಯ, ಎಲ್.ಆರ್. ನಗರ, ಅಂಬೇಡ್ಕರ್ ನಗರ, ನೀಲಸಂದ್ರ, ಆಸ್ಟಿನ್ಟೌನ್, ಈಜಿಪುರ, ವಿವೇಕನಗರ, ಅಶೋಕ ನಗರ, ರಿಚ್ಮಂಡ್ ಟೌನ್, ಎಂ.ಜಿ.ರಸ್ತೆ, ಜೆ.ಕೆ.ಪುರ, ಎಂ.ಬಿ.ಗಾರ್ಡನ್, ವಿಕ್ಟೋರಿಯಾ ಬಡಾವಣೆ, ಜೀವನ್ ಬಿಮಾನಗರ, ಎಚ್.ಎ.ಎಲ್3ನೇ ಹಂತ, ದೊಮ್ಮಲೂರು, ಅಮರಜ್ಯೋತಿ ಬಡಾವಣೆ, ಕೋಡಿಹಳ್ಳಿ, ಹನುಮಂತಪ್ಪ ಬಡಾವಣೆ, ಹಲಸೂರು, ಜೋಗುಪಾಳ್ಯ, ಕೇಂಬ್ರಿಜ್ ಬಡಾವಣೆ, ಗೌತಮ ಪುರ, ದೀನಬಂಧು ನಗರ, ರಾಜೇಂದ್ರ ನಗರ.

ನಂಜಪ್ಪ ರೆಡ್ಡಿ ಬಡಾವಣೆ, ಕೆ.ಆರ್. ನಂಜಪ್ಪ ಬಡಾವಣೆ, ಆಡುಗೋಡಿ, ಕೋರಮಂಗಲ, ಕೆ.ಎಚ್.ಬಿ ಬ್ಲಾಕ್, ಕತ್ತಳಿ ಪಾಳ್ಯ, ಕೆ.ಎಚ್.ಬಿ. ಕಾಲೊನಿ, ಜಾನ್ ನಗರ, ಎನ್ಜಿವಿ, ಜಯನಗರ, ತಿಲಕ ನಗರ, ಎಸ್.ಆರ್.ನಗರ, ಚಂದ್ರಪ್ಪ ನಗರ, ಈರಮ್ಮ ಬಡಾವಣೆ,

ವೆಂಕಟೇಶ್ವರ ಬಡಾವಣೆ, ಭುವನಪ್ಪ ಬಡಾವಣೆ, ಜೋಗಿ ಕಾಲೊನಿ, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಮಾರುತಿ ನಗರ, ನೇತಾಜಿ ನಗರ, ನಾಗಮ್ಮ ನಗರ, ಕೇಶವನಗರ, ಕೆ.ಪಿ.ಅಗ್ರಹಾರ, ನ್ಯೂ ಬಿನ್ನಿ ಬಡಾವಣೆ, ಶ್ರೀನಗರ, ಚಾಮರಾಜಪೇಟೆ, ಪಾದರಾಯನಪುರ ವಿದ್ಯಾಪೀಠ, ಶ್ರೀನಿವಾಸ ನಗರ, ಬ್ಯಾಂಕ್ ಕಾಲೊನಿ, ಐ.ಟಿ.ಐ ಬಡಾವಣೆ, ಗುರುರಾಜ ಬಡಾವಣೆ, ಕತ್ರಿಗುಪ್ಪೆ, ಬಸವನಗುಡಿ, ಎನ್.ಆರ್. ಕಾಲೊನಿ, ಕುಮಾರ ಸ್ವಾಮಿ ಬಡಾವಣೆ, ವಿಠ್ಠಲ ನಗರ, ಬನಶಂಕರಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

Edited By : Nirmala Aralikatti
PublicNext

PublicNext

30/08/2021 11:54 am

Cinque Terre

20.34 K

Cinque Terre

0