ಹಿಂಸಾತ್ಮಕವಾಗಿ ನಾಯಿಗಳನ್ನ ಹಿಡಿದು ಅರಣ್ಯ ಬಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳಿಯಾಳ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಮುಖ್ಯಾಧಿಕಾರಿ ಪರಶುರಾಮ ಶಿಂಧೆ ವಿರುದ್ಧ ಹಳಿಯಾಳ ಪಶುವೈದ್ಯಾಧಿಕಾರಿ ಖಾಲಿದಾಲಿ ನದಾಫ್ ಎಂಬುವರು ನೀಡಿದ ದೂರಿನನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ನಾಯಿಗಳನ್ನ ಹಿಂಸಾತ್ಮಕವಾಗಿ ಹಿಡಿದು ಅರಣ್ಯಕ್ಕೆ ಸಾಗಿಸಿರುವ ಬಗ್ಗೆ ರಾಜ್ಯ ಪಶುಪಾಲನಾ ಇಲಾಖೆಗೆ ಹಳಿಯಾಳದ ಅನೇಕರು ದೂರು ನೀಡಿದ್ದರು. ತಕ್ಷಣ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ದೂರು ದಾಖಲಿಸುವಂತೆ ಪಶುಪಾಲನಾ ಇಲಾಖೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಪಶುವೈದ್ಯಾಧಿಕಾರಿಗಳು ದೂರು ದಾಖಲಿಸಿದ್ದಾರೆ.
PublicNext
26/09/2022 02:21 pm