ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೋಕರ್ಣ : ಬೆಲೆಕಾನ್‌ಗೆ ಬಂದ ವಸತಿ ಬಸ್ -ಗ್ರಾಮಸ್ಥರಲ್ಲಿ ಸಂತಸ, ಬಸ್‌ಗೆ ಪೂಜಿಸಿ ಸಿಹಿ ವಿತರಣೆ

ಗೋಕರ್ಣ : ಮಂಗಳೂರು ವಿಭಾಗದ ಉಡುಪಿ ಘಟಕದಿಂದ ಬೆಲೆಕಾನ್‌ಗೆ ವಸತಿ ಬಸ್ ಸೇವೆಯು (ಅಶ್ವಮೆದ ಬಸ್) ಇತ್ತೀಚೆಗೆ ಪ್ರಾರಂಭವಾಗಿದ್ದು, ಜನತೆಯ ಕೋರಿಕೆ ಮೇರೆಗೆ ಸೇವೆ ಆರಂಭವಾಗಿರುವುದಕ್ಕೆ ಸಂಸ್ಥೆಗೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ.

ಈ ಹಿಂದೆ ಉಡುಪಿಯಿಂದ ಗೋಕರ್ಣ ಕ್ಕೆ ಬಂದ ಬಸ್ಸು ವಸತಿ ಮಾಡಿ ಬೆಳಿಗ್ಗೆ ಅದೇ ಮಾರ್ಗದಲ್ಲಿ ಮರಳುತಿತ್ತು ಇದರಿಂದ ಬೆಲೆಕಾನ್ ಜನತೆಗೆ ಮಣಿಪಾಲ, ಮಂಗಳೂರು ಆಸ್ಪತ್ರೆ ಹೋಗಲು ಅನಾನುಕೂಲತೆ ಉಂಟಾಗಿತ್ತು. ಗೋಕರ್ಣದ ಬದಲಾಗಿ ಬೆಲೆಕಾನ್ ನಲ್ಲಿ ವಸತಿ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದರು .

ಸಾರ್ವಜನಿಕರ ಕೋರಿಕೆ ಮೇರೆಗೆ ನೂತನ ಮಾರ್ಗ ಪ್ರಾರಂಭ ಮಾಡಿರುವುದಕ್ಕೆ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಬಸ್ ಉಡುಪಿಯಿಂದ ಸಂಜೆ 5.20 ಕ್ಕೆ ಬಿಟ್ಟು ರಾತ್ರಿ 10 ಕ್ಕೆ ಬೆಲೆಕಾನ್ ಬಂದು ವಸತಿ ಮಾಡಿ ಬೆಳಿಗ್ಗೆ 6.15 ಕ್ಕೆ ಬೆಲೆಕಾನ್ ನಿಂದ ಬಿಟ್ಟು 10.30 ಕ್ಕೆ ಉಡುಪಿ ತಲುಪಲಿದೆ.

ತೇಜು ನಾಯ್ಕ, ಜಯಪ್ರಕಾಶ್ ನಾಯ್ಕ, ಲಕ್ಷ್ಮಣ್ ನಾಯ್ಕ,, ವಸಂತ ನಾಯ್ಕ, ವಾಮನ್ ಮೂರ್ತಿ, ಚೂಡು, ಬಾಬು, ಪಾಂಡು, ರಾಘು ಬೆಲೆಕಾನ್ ಹಾಗೂ ಗ್ರಾಮದ ಸಮಸ್ತ ಸಾರ್ವಜನಿಕರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ .

Edited By : PublicNext Desk
Kshetra Samachara

Kshetra Samachara

03/12/2024 12:07 pm

Cinque Terre

3.24 K

Cinque Terre

0