ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪರೇಶ್ ಮೇಸ್ತಾ ಪ್ರಕರಣ; ಬಿಜೆಪಿಗರಿಗೆ ಸವಾಲೆಸೆದ ಕಾಂಗ್ರೆಸ್ಸಿಗರು!

ಕಾರವಾರ (ಉತ್ತರಕನ್ನಡ): ಪರೇಶ್ ಮೇಸ್ತಾ ಪ್ರಕರಣದಲ್ಲಿ ಸಿಬಿಐ 'ಬಿ' ರಿಪೋರ್ಟ್ ಸಲ್ಲಿಸಿರುವುದನ್ನ ಒಪ್ಪಿಕೊಳ್ಳದ ಬಿಜೆಪಿಗರು, ಬೇಕಿದ್ದರೆ ಪ್ರಕರಣವನ್ನು ಮರು ತನಿಖೆಗೆ ನೀಡಲಿ ಎಂದು ಕಾರವಾರದ ಮಾಜಿ ಶಾಸಕ ಸತೀಶ್ ಸೈಲ್ ಸವಾಲು ಹಾಕಿದ್ದಾರೆ.

ಪರೇಶ್ ಮೇಸ್ತಾ ಪ್ರಕರಣದಲ್ಲಿ ಆತನದ್ದು ಕೊಲೆಯಲ್ಲ, ಸಹಜ ಸಾವು ಎಂದು ಸಿಬಿಐ ನ್ಯಾಯಾಲಯಕ್ಕೆ ವರದಿ ನೀಡಿದೆ. ಆದರೆ, ಇದನ್ನು ಬಿಜೆಪಿಯ ರಾಜ್ಯ ನಾಯಕರುಗಳಾದ ಸಿ.ಟಿ.ರವಿ, ಈಶ್ವರಪ್ಪ ಮುಂತಾದವರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಹಾಗಿದ್ದರೆ ಕಾನೂನಾತ್ಮಕವಾಗಿ ಇರುವಂತೆ ಸರ್ಕಾರ ಈ ಪ್ರಕರಣದ ಮರು ತನಿಖೆಗೆ ನೀಡಲಿ. ಇಲ್ಲವೆಂದಾದರೆ ತಮ್ಮ ತಪ್ಪನ್ನು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಯುವಕನ ಸಾವನ್ನು ಅಂದು ರಾಜಕೀಯವಾಗಿ ಬಳಸಿಕೊಂಡವರು ಈಗ ಶಾಸಕರಾಗಿದ್ದಾರೆ. ಇವರಾದರೂ ಈಗ ಮರು ತನಿಖೆಗೆ ಮೃತನ ತಂದೆಯ ಪರವಾಗಿಯಾದರೂ ಅರ್ಜಿ ಸಲ್ಲಿಸಲಿ. ಇದ್ಯಾವುದೂ ಆಗದಿದ್ದರೆ ಮೃತನ ಕುಟುಂಬಕ್ಕೆ ಹೆಚ್ಚಿನ ಮೊತ್ತದ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಇನ್ನು, ಜಿಲ್ಲಾ ಕಾಂಗ್ರೆಸ್ ವಕ್ತಾರ ಶಂಭು ಶೆಟ್ಟಿ ಮಾತನಾಡಿ, ಕೇಂದ್ರ ಸರ್ಕಾರದ ನೇರ ಅಧೀನದಲ್ಲಿರುವ ಗೃಹ ಇಲಾಖೆಯ ಸಿಬಿಐ ವರದಿಯನ್ನೇ ಬಿಜೆಪಿಗರು ಪ್ರಶ್ನೆ ಮಾಡುತ್ತಿರುವುದು ವಿಷಾದನೀಯ. ಅಂದು ಈ ಪ್ರಕರಣವನ್ನಿಟ್ಟುಕೊಂಡು ಬಿಜೆಪಿಗರು ಜಿಲ್ಲೆ, ರಾಜ್ಯದಾದ್ಯಂತ ಕೋಮುಗಲಭೆಗೆ ಕಾರಣರಾದರು. ಹೀಗಾಗಿ ಅಂದಿನ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹಾನಿಗೊಳಗಾದವರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Edited By : Nagesh Gaonkar
PublicNext

PublicNext

05/10/2022 09:40 pm

Cinque Terre

37.12 K

Cinque Terre

0

ಸಂಬಂಧಿತ ಸುದ್ದಿ