ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಅರಣ್ಯವಾಸಿಗಳ ಹಕ್ಕಿನ ಹೋರಾಟಕ್ಕೆ 32 ವರ್ಷ; ಹೋರಾಟ ತೀವ್ರತೆಗೆ ಉರುಳುಸೇವೆ ಮೂಲಕ ಚಾಲನೆ

ಕಾರವಾರ: ಅರಣ್ಯ ಭೂಮಿ ಹಕ್ಕಿನ ಹೋರಾಟವು 32ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ, ವಿಶಿಷ್ಟ ಸಾಂಸ್ಕೃತಿಕ ವಾದ್ಯ, ಡೊಳ್ಳು, ನೃತ್ಯಗಳೊಂದಿಗೆ, ಮಳೆಯಲ್ಲಿಯೂ ಉತ್ಸಾಹದಿಂದ ಜಿಲ್ಲಾದ್ಯಂತ ಬೃಹತ್ ಸಂಖ್ಯೆಯಲ್ಲಿ ಆಗಮಿಸಿದ ಅರಣ್ಯ ಅತಿಕ್ರಮಣದಾರರ ಸಮ್ಮುಖದಲ್ಲಿ ಹೋರಾಟಗಾರರ ಪ್ರಮುಖರು ‘ಉರುಳು ಸೇವೆ’ ಮಾಡುವ ಮೂಲಕ ವಿಶೇಷ ರೀತಿಯಲ್ಲಿ ಇಂದು ಅರಣ್ಯ ಭೂಮಿ ಹಕ್ಕಿಗಾಗಿ ಹಕ್ಕೊತ್ತಾಯಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಇಂದು ಶಿರಸಿ ಮಾರಿಕಾಂಬ ದೇವಾಲಯದ ಎದುರು ಉರುಳು ಸೇವೆ ಮಾಡಲಾಯಿತು. ಅರಣ್ಯ ಹಕ್ಕಿಗಾಗಿ ಒತ್ತಾಯದ ಘೋಷಣೆ ಮೂಲಕ ಹೋರಾಟದ ಬಾವುಟ ಹಾರಿಸಿ ವಿಭಿನ್ನ ರೀತಿಯ ಹೋರಾಟಕ್ಕೆ ಚಾಲನೆ ನೀಡಲಾಯಿತು.

ಉರುಳು ಸೇವೆ ಪ್ರತಿಭಟನೆಯ ಬಳಿಕ ಶಿರಸಿ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿ ನಡೆದ ಅರಣ್ಯವಾಸಿಗಳ ಸಭೆಯಲ್ಲಿ ಮಾತನಾಡಿದ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಸದ್ಯ ನಡೆಯುತ್ತಿರುವ ವಿಧಾನಸಭಾ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರವಾಗಿ ಸುಪ್ರೀಂ ಕೋರ್ಟಿನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ತೀರ್ಮಾನ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಅಧಿವೇಶನದ ನಂತರ ಜನಪ್ರತಿನಿಧಿಗಳ ಮನೆಗಳ ಮುಂದೆ ಧರಣಿ ಮಾಡುವುದರೊಂದಿಗೆ ಜಿಲ್ಲಾದ್ಯಂತ ಅರಣ್ಯವಾಸಿ ವಿರೋಧಿ ನೀತಿಯ ಕುರಿತು ಜನಜಾಗೃತಿ ಮತ್ತು ಜನಾಂದೋಲನ ಮಾಡುವುದಾಗಿ ಎಚ್ಚರಿಕೆ ನೀಡಿದರು.

Edited By : Nagesh Gaonkar
PublicNext

PublicNext

13/09/2022 05:31 pm

Cinque Terre

26.04 K

Cinque Terre

0

ಸಂಬಂಧಿತ ಸುದ್ದಿ