ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ: ಪಕ್ಷದ ಕಾರ್ಯಕರ್ತರಿಂದಲೇ ಕಪ್ಪು ಬಾವುಟ ಪ್ರದರ್ಶನ; ಮುಜುಗರಕ್ಕೆ ಒಳಗಾದ ಬಿಜೆಪಿ ಶಾಸಕ

ಕಾರವಾರ (ಉತ್ತರಕನ್ನಡ): ಭಟ್ಕಳ- ಹೊನ್ನಾವರ ವಿಧಾನದ ಕ್ಷೇತ್ರದ ಶಾಸಕ ಸುನೀಲ ನಾಯ್ಕ ಪಾಲ್ಗೊಂಡಿದ್ದ ಹೊನ್ನಾವರ ತಾಲೂಕಿನ ಕೋಟೆಬೈಲ್‌ ನ ಕಾರ್ಯಕ್ರಮವೊಂದರಲ್ಲಿ ಅವರದೇ ಬಿಜೆಪಿ ಪಕ್ಷದ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿರುವ ಘಟನೆ ನಡೆದಿದೆ.

ತಮ್ಮ ಗ್ರಾಮದ ರಸ್ತೆ ಕೆಲಸ ಆಗಿಲ್ಲ, ಹಣ ಮಂಜೂರಿ ಮಾಡಿಲ್ಲ ಎಂದು ಶಾಸಕ ಸುನೀಲ್ ನಾಯ್ಕ ಕಾಯಕ್ರಮದಲ್ಲಿ ಇರುವಾಗಲೇ ಪಕ್ಕದ ಮುಟ್ಟಾ ಗ್ರಾಮದ ಐದಾರು ಜನರು ಕಪ್ಪು ಬಾವುಟ ಹಿಡಿದು ಸಭಾಂಗಣದ ಸನಿಹದಲ್ಲೆ ನಿಂತಿದ್ದರು. ಬಾವುಟ ಎತ್ತಿ ಶಾಸಕರಿಗೆ ತೋರಿಸುತ್ತಲೆ ಇದ್ದರು.

ಸುಮಾರು ಹತ್ತು ನಿಮಿಷವಾದರೂ ಬಾವುಟ ಹಿಡಿದೇ ನಿಂತಿದ್ದನ್ನು ನೋಡಿ ಸೇರಿರುವ ಶಾಸಕರ ಬೆಂಬಲಿಗರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಜಮಾಯಿಸಿ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ನಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರತಿಭಟನೆ ನಿರತರನ್ನು ಕಳುಹಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

Edited By : Somashekar
PublicNext

PublicNext

06/10/2022 08:14 pm

Cinque Terre

29.91 K

Cinque Terre

1

ಸಂಬಂಧಿತ ಸುದ್ದಿ