ಬೈಂದೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬೈಂದೂರು ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಮರವಂತೆ ಇವರ ಆಶ್ರಯದಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟ ಇಂದು ಸಡಗರ ಸಂಭ್ರಮದಲ್ಲಿ ನಡೆಯಿತು.
ಒಟ್ಟು 18 ತಂಡಗಳು ಭಾಗವಹಿಸಿದ್ದವು. ಈ ಪೈಕಿ ಇಲ್ಲಿ ವಿಜೇತ ತಂಡಗಳು ಉಪ್ಪುಂದಲ್ಲಿ ಪ್ರೌಢಶಾಲೆಯಲ್ಲಿ ನಡೆಯುವ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗುತ್ತದೆ. ಪಂದ್ಯಾಟದ ಕೇಂದ್ರ ಬಿಂದು ಕ್ರೀಡಾ ಪ್ರೇಮಿ ಹಾಗೂ ಕಂಬಳ ಪ್ರೇಮಿ 67 ವರ್ಷದ ವೆಂಕಟರಮಣ ಗಾಣಿಗ ಮಕ್ಕಳನ್ನು ಹುರಿದುಂಬಿಸಿದರು.
ಈ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನ ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು, ದ್ವಿತೀಯ ಸ್ಥಾನವನ್ನು ಸರಕಾರಿ ಪದವಿಪೂರ್ವ ಕಾಲೇಜು ನಾವುಂದ ಪಡೆದುಕೊಂಡಿದೆ.ಬಾಲಕಿಯರ ಪಂದ್ಯಾಟದಲ್ಲಿ ಪ್ರಥಮ ಸರಕಾರಿ ಪ್ರೌಢಶಾಲೆ ಉಪ್ಪಿನಕುದ್ರು, ದ್ವಿತೀಯ ಸ್ಥಾನ ಸರಕಾರಿ ಪ್ರೌಢಶಾಲೆ ಆಲೂರು ಪಡೆದುಕೊಂಡಿದೆ.
Kshetra Samachara
10/09/2022 01:02 pm