ಉಡುಪಿ: ಬಾರಕೂರಿನ ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನಕ್ಕೆ ಕೇರಳದ ತಿರುವನಂತಪುರದ ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಮಹಾರಾಜರಾದ ಪದ್ಮನಾಭ ವರ್ಮರು ಭೇಟಿ ಇಂದು ನೀಡಿದರು.
ಈ ಸಂದರ್ಭ ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಭಟ್ ಅವರಿಂದ ಮಹಾರಾಜರು ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಆಪ್ತ ಕಾರ್ಯದರ್ಶಿ ರಾಮು, ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ಜಯರಾಮ ರಾವ್, ಭಜನಾ ಗುರುಗಳಾದ ರಾಘವೇಂದ್ರ ರಾವ್, ಕೃಷ್ಣಮೂರ್ತಿ ರಾವ್, ಶ್ರೀ ಮಾಸ್ತಿದುರ್ಗಾ ಮಹಿಳಾ ಭಜನಾ ಬಳಗದ ಸದಸ್ಯರು ಉಪಸ್ಥಿತರಿದ್ದರು.
Kshetra Samachara
27/02/2021 08:54 am