ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರ್ಕಳ: ಪರ್ಕಳದಲ್ಲಿ ದೈತ್ಯ ಆಕೃತಿಯ ಬಸವನಿಗೆ ಜನರು ಫಿದಾ!

ಇತ್ತೀನ ದಿನಗಳಲ್ಲಿ ಬಸವ ನಾಪತ್ತೆಯಾಗಿದೆ.ಎಲ್ಲೆಡೆ ಕಂಡುಬರುತ್ತಿದ್ದ ಬಸವ ,ಬಹುತೇಕ ಕಣ್ಮರೆಯಾಗಿರುವ ಹೊತ್ತಿಗೆ ಮಣಿಪಾಲ ಸಮೀಪದ ಪರ್ಕಳದಲ್ಲಿ ದೈತ್ಯ ಆಕೃತಿಯ ಕೋಲೇ ಬಸವ ಕೆಲಕಾಲ ಜನರ ಆಕರ್ಷಣೆಯ ಕೇಂದ್ರಬಿಂದುವಾಯಿತು. ಶಿರಡಿಯಿಂದ ಈ ಕೋಲೆ ಬಸವ ಇಲ್ಲಿಗೆ ಬಂದಿತ್ತು.

ದಿನನಿತ್ಯ ಊರೂರು ಸಂಚರಿಸುವ ಈ ಬಸವ ಆಳೆತ್ತರ ಇದ್ದು , ಇದರ ಕೊಂಬು ಮತ್ತು ಮೈಕಟ್ಟು ಅತ್ಯಾಕರ್ಷಕವಾಗಿದೆ. ಇಲ್ಲಿನ ಹೋಟೆಲ್ ಮಾಲಕರಾದ ಮೋಹನ್ ದಾಸ್ ನಾಯಕ್ ಪರ್ಕಳ ಮತ್ತು ಸಮಾಜಸೇವಕ ಗಣೇಶ್ ರಾಜ್ ಅವರು ಬಾಳೆಹಣ್ಣು ಹಾಗೂ ತಿಂಡಿ ತಿನಸು ನೀಡುವುದರ ಮೂಲಕ ಬಸವನ ಹೊಟ್ಟೆ ತಣಿಸಿದರು.

ಈ ಆಳೆತ್ತರದ ಬಸವನ ಆರೈಕೆಗೆ ಮೂವರಿದ್ದಾರೆ! ಪರ್ಕಳದಲ್ಲಿ ಕೆಲಹೊತ್ತು ತಂಗಿದ ಬಳಿಕ ಬಸವ ಕಾರ್ಕಳದತ್ತ ಪ್ರಯಾಣ ಬೆಳೆಸಿತು.

Edited By :
Kshetra Samachara

Kshetra Samachara

27/05/2022 04:46 pm

Cinque Terre

2.73 K

Cinque Terre

2

ಸಂಬಂಧಿತ ಸುದ್ದಿ