ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸೋಮವಾರ 'ಡಾl ವಿ. ಎಸ್. ಆಚಾರ್ಯ ಬಸ್ ನಿಲ್ದಾಣ' ಉದ್ಘಾಟಿಸಲಿರುವ ಸಿಎಂ

ಉಡುಪಿ: ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಗ್ರಾಮಾಂತರ ಬಸ್ಸು ನಿಲ್ದಾಣಕ್ಕೆ "ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣ" ಎಂದು ನಾಮಕರಣ ಮಾಡಲಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಈ ನೂತನ ಬಸ್ ನಿಲ್ದಾಣವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಿನಾಂಕ 11-04-2022 ರಂದು ಅಪರಾಹ್ನ 3.00 ಗಂಟೆಗೆ ಉದ್ಘಾಟಿಸಲಿದ್ದಾರೆ. ಈ ಬಸ್‌ ನಿಲ್ದಾಣಕ್ಕೆ "ಡಾ. ವಿ. ಎಸ್.‌ ಆಚಾರ್ಯ ಬಸ್‌ ನಿಲ್ದಾಣ" ಎಂದು ನಾಮಕರಣ ಮಾಡಲು ಶಾಸಕ ಕೆ ರಘುಪತಿ ಭಟ್ ಅವರ ಮನವಿಯಂತೆ ಜಿಲ್ಲಾಧಿಕಾರಿಯವರ ಮುಖಾಂತರ ಸಲ್ಲಿಸಿರುವ ಪ್ರಸ್ತಾವನೆಗೆ ಕ.ರಾ.ರ.ಸಾ. ನಿಗಮದ ನಿರ್ದೇಶಕರ ಮಂಡಳಿ ಸಭೆಯು ನೀಡಿರುವ ಅನುಮೋದನೆಗೆ ಮುಖ್ಯಮಂತ್ರಿಯವರು ಒಪ್ಪಿಗೆ ನೀಡಿ ಸರ್ಕಾರ "ಡಾll ವಿ. ಎಸ್.‌ ಆಚಾರ್ಯ ಬಸ್‌ ನಿಲ್ದಾಣ" ಎಂದು ನಾಮಕರಣ ಮಾಡಿ ಆದೇಶಿಸಿದೆ.

Edited By : PublicNext Desk
Kshetra Samachara

Kshetra Samachara

09/04/2022 04:52 pm

Cinque Terre

1.69 K

Cinque Terre

0

ಸಂಬಂಧಿತ ಸುದ್ದಿ