ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೇಂದ್ರ ಬಜೆಟ್ ನಿರಾಶಾದಾಯಕ ,ಬಡವರ ನಿರ್ಲಕ್ಷ್ಯ: ರಮೇಶ್ ಕಾಂಚನ್

ಉಡುಪಿ: ಕೇಂದ್ರ ಬಜೆಟ್‌ ನಿರಾಶಾದಾಯಕವಾಗಿದ್ದು ಮಧ್ಯಮ ಹಾಗೂ ಬಡವರ್ಗದವರನ್ನು ಸಂಪೂರ್ಣ ನಿರ್ಲಕ್ಷಿಸಿ ಕೇವಲ ಬಂಡವಾಳಶಾಹಿಗಳಿಗೆ ನೆರವಾಗುವ ನಿಟ್ಟಿನಲ್ಲಿದೆ ಎಂದು ಉಡುಪಿ ನಗರಸಭೆಯ ಪ್ರತಿಪಕ್ಷ ನಾಯಕ ಹಾಗೂ ಉಡುಪಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಮೇಶ್‌ ಕಾಂಚನ್‌ ಹೇಳಿದ್ದಾರೆ.

ಈ ಬಾರಿಯ ಬಜೆಟ್‌ ಕುರಿತು ದೇಶದ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಮಧ್ಯಮ ಹಾಗೂ ಬಡವರ್ಗದ ಜನರು ವಿಶೇಷವಾದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ದಿನನಿತ್ಯದ ಬೆಲೆಗಳ ಏರಿಕೆ ಮಾಡಿರುವುದರೊಂದಿಗೆ ಗ್ಯಾಸ್‌, ಇಂಧನ ಹಾಗೂ ಪ್ರತಿಯೊಂದರಲ್ಲೂ ಕೂಡ ಶ್ರೀಮಂತ ವರ್ಗಕ್ಕೆ ನೆರವಾಗುವ ನಿಟ್ಟಿನಲ್ಲಿ ವಿತ್ತ ಸಚಿವರು ತಮ್ಮ ಬಜೆಟ್‌ ಮಂಡಿಸಿದ್ದಾರೆ.

ಸಾಮಾನ್ಯನ ಬದುಕಿನ ಬಗ್ಗೆ ಬಜೆಟ್ ಯೋಚನೆಯನ್ನೇ ಮಾಡಿಲ್ಲ. ಕೋವಿಡ್, ಬೆಲೆ ಏರಿಕೆಯಿಂದ ತತ್ತರಿಸಿದ ಬಡಜನರ ಬಗ್ಗೆ ಕನಿಕರ ತೋರಿಲ್ಲ. ಕೋವಿಡ್ ಸಂಕಷ್ಟದ ನಂತರ ದೇಶದಲ್ಲಿ ಬಡತನಕ್ಕೆ ಹೆಚ್ಚು ಜನರು ದೂಡಲ್ಪಡುತ್ತಿದ್ದರೆ, ಸಿರಿವಂತರು ಮತ್ತಷ್ಟು ಸಿರಿವಂತರಾಗುತ್ತಿದ್ದಾರೆ. ಈ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟ ಪರಿಹಾರ ಇಲ್ಲ.

ಸೋಂಕಿನ ಮಾರಿಗೆ ಸಿಲುಕಿ ಭರವಸೆ ಕಳೆದುಕೊಂಡಿರುವ ರೈತಾಪಿ, ಕಾರ್ಮಿಕರಿಗೆ ಧೈರ್ಯ ತುಂಬುವ ಅಥವಾ ಅವರನ್ನು ಆರ್ಥಿಕವಾಗಿ ಮೇಲೆತ್ತುವ ಯಾವುದೇ ಅಂಶಗಳು ಇಲ್ಲದೆ ಇರುವುದು ಸರಕಾರ ಬಂಡವಾಳಶಾಹಿಗಳ ಪರವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಟ್ಟಾರೆಯಾಗಿ ಇದು ಜನಸ್ನೇಹಿ ಬಜೆಟ್ ಅಲ್ಲವೇ ಅಲ್ಲ, ಬದಲಾಗಿ ಸರ್ಕಾರ ಶ್ರೀಮಂತರ ಪರವಾಗಿದೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

01/02/2022 07:53 pm

Cinque Terre

410

Cinque Terre

1

ಸಂಬಂಧಿತ ಸುದ್ದಿ