ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ಪ್ರಧಾನ ಪಾತ್ರವಿದೆ. ಹಲವಾರು ಕಾರಣಗಳಿಂದ ಅನಾಥವಾಗುವ ಗೋವುಗಳ ರಕ್ಷಣೆಯ ಸದುದ್ದೇಶದಿಂದ ದೇಶಾದ್ಯಂತ ಕಾರ್ಯನಿರ್ವಹಿಸುತಿರುವ ಗೋಶಾಲೆಗಳಿಗೆ ಕೇಂದ್ರ ಸರಕಾರದ ಯೋಜನೆಯಿಂದಾಗಿ ಆರ್ಥಿಕ ಚೈತನ್ಯ ತುಂಬಲಿದೆ ಎಂದು ಬಿಜೆಪಿ ಮುಖಂಡ ಯಶಪಾಲ್ ಎ. ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಸಂಕಷ್ಟದಿಂದ ತೀರಾ ವೆಚ್ಚದಾಯಕವಾದ ಗೋಶಾಲೆಗಳ ನಿರ್ವಹಣೆ ತೀವ್ರ ಸಮಸ್ಯೆ ಎದುರಿಸುತ್ತಿದೆ. ಈ ಬಗ್ಗೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕೇಂದ್ರ ಸರಕಾರಕ್ಕೆ ಕನಿಷ್ಠ 200 ಕೋಟಿ ರೂ. ಪರಿಹಾರ ನಿಧಿ ಕೋರಿ ಆಗಸ್ಟ್ ತಿಂಗಳಲ್ಲಿ ಮನವಿ ಸಲ್ಲಿಸಿದ್ದರು.
ಶ್ರೀಪಾದರ ಮನವಿ ಪುರಸ್ಕರಿಸಿ ಈ ಗಂಭೀರ ಸಮಸ್ಯೆಯನ್ನು ಪರಿಹರಿಸಿ ಗೋಶಾಲೆಗಳಿಗೆ ಆರ್ಥಿಕ ಶಕ್ತಿ ತುಂಬುವ ನಿಟ್ಟಿನಲ್ಲಿ 900 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸುವ ಮೂಲಕ ಕೇಂದ್ರ ಸರಕಾರ ಗೋರಕ್ಷಣೆ ಬಗ್ಗೆ ಬದ್ಧತೆ ಪ್ರದರ್ಶಿಸಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
Kshetra Samachara
12/11/2020 11:35 am