ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಧ್ಯಕ್ಷೆ ಸುಮಾ ಕೇಶವ್, ಉಪಾಧ್ಯಕ್ಷೆ ಪಲ್ಲವಿ: ಕಾರ್ಕಳ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದ ಬಿಜೆಪಿ

ಕಾರ್ಕಳ: ಕಾರ್ಕಳ ಪುರಸಭೆ ನೂತನ ಅಧ್ಯಕ್ಷೆಯಾಗಿ ಬಿಜೆಪಿಯ ಸುಮಾ ಕೇಶವ್ ಹಾಗೂ ಉಪಾಧ್ಯಕ್ಷೆಯಾಗಿ ಪಲ್ಲವಿ ಆಯ್ಕೆಯಾಗಿದ್ದು, ಈ ಮೂಲಕ ಪುರಸಭೆ ಆಡಳಿತ ಬಿಜೆಪಿ ಪಾಲಾಗಿದೆ.

ಮಂಗಳವಾರ ಪುರಸಭೆಯಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಅಧ್ಯಕ್ಷ ಹುದ್ದೆಗೆ ಬಿಜೆಪಿಯ ಸುಮಾ ಕೇಶವ್, ಕಾಂಗ್ರೆಸ್‌ನಿಂದ ನಳಿನಿ ಆಚಾರ್ಯ ನಾಮಪತ್ರ ಸಲ್ಲಿಸಿದ್ದರು.

ಹಿಂದುಳಿದ ವರ್ಗ ಎ ಮಹಿಳೆ ಮೀಸಲಾದ ಉಪಾಧ್ಯಕ್ಷತೆಗೆ ಬಿಜೆಪಿಯಿಂದ ಪಲ್ಲವಿ ಮತ್ತು ಕಾಂಗ್ರೆಸ್‌ನಿಂದ ಪ್ರಭಾ ನಾಮಪತ್ರ ಸಲ್ಲಿಸಿದ್ದರು. ಕೈ ಎತ್ತಿ‌ ಬಹುಮತ‌ ಸಾಬೀತಿನ ಮೇಲೆ ಚುನಾವಣೆ ನಡೆಯಿತು.

ಬಿಜೆಪಿಯ ಸುಮಾ ಕೇಶವ್ ಮತ್ತು ಪಲ್ಲವಿ ತಲಾ ೧೩ ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ತಲಾ ೧೧ ಮತ ಚಲಾವಣೆಯಾಗಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ತಲಾ ೧೧ ಸದಸ್ಯರ ಸಂಖ್ಯೆ ಬಲ ಹೊಂದಿತ್ತು. ಸಂಸದರು ಮತ್ತು ಶಾಸಕರ ಮತಗಳು ಬಿಜೆಪಿಗೆ ದೊರಕಿತ್ತು. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಇದು ಸಹಕಾರಿಯಾಯಿತು.

ಪುರಸಭೆ ಆರನೇ ವಾರ್ಡ್ ನ ಪಕ್ಷೇತರ ಸದಸ್ಯ ಲಕ್ಷ್ಮಣ ನಾರಾಯಣ ಮಲ್ಯ ಮತದಾನಕ್ಕೆ ಬಾರದೆ ಹೊರಗುಳಿದಿದ್ದರು. ಚುನಾವಣೆ ಅಧಿಕಾರಿಯಾಗಿ ತಾಲೂಕು ದಂಡಾಧಿಕಾರಿ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಕರ್ತವ್ಯ ನಿರ್ವಹಿಸಿದರು.

ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ವಿ.ಸುನಿಲ್‌ಕುಮಾರ್, ಆಡಳಿತ ಪಕ್ಷದ ಸದಸ್ಯರು, ವಿಪಕ್ಷ ಸದಸ್ಯರು, ಪುರಸಭೆ ಅಧಿಕಾರಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.

Edited By : Nirmala Aralikatti
Kshetra Samachara

Kshetra Samachara

28/10/2020 07:20 am

Cinque Terre

12.93 K

Cinque Terre

4

ಸಂಬಂಧಿತ ಸುದ್ದಿ