ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ ಬಂದರಿನಲ್ಲಿ ಆತಂಕ ಸೃಷ್ಟಿಸಿದ ಮಾನಸಿಕ ಅಸ್ವಸ್ಥನ ರಕ್ಷಣೆ

ಉಡುಪಿ: ಮಲ್ಪೆ ಬಂದರಿನಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ ಮಾನಸಿಕ ಅಸ್ವಸ್ಥನನ್ನು ರಕ್ಷಿಸಿರುವ ಘಟನೆ ನಡೆದಿದೆ.

ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ರೋಗಿಯನ್ನು ದೊಡ್ಡಣಗುಡ್ಡೆಯ ಡಾ.ಎ.ವಿ.ಬಾಳಿಗ ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಮಾನಸಿಕ ಅಸ್ವಸ್ಥ ವಿದ್ಯುತ್ ಕಂಬ ಹತ್ತುವುದು ಮತ್ತು ಉಗ್ರ ರೀತಿಯಲ್ಲಿ ವರ್ತಿಸುತ್ತಿದ್ದುದರಿಂದ ಸ್ಥಳದಲ್ಲಿ ಭಯದ ವಾತಾವರಣ ಎದುರಾಗಿತ್ತು.

ಕಾರ್ಯಚರಣೆಯಲ್ಲಿ ಮಲ್ಪೆ ಠಾಣೆಯ ಸಿಬ್ಬಂದಿಗಳಾದ ರತ್ನಾಕರ್ ಶೆಟ್ಟಿ, ರವಿರಾಜ್, ಹಾಗೂ ಚಾಲಕ ಸಂದೇಶ್, ಭಾಗಿಯಾಗಿದ್ದರು. ಯುವಕ ತನ್ನ ಹೆಸರು ಪಿಂಕು ಮುಂಡ (30 ) ಎಂದು ಹೇಳಿಕೊಂಡಿದ್ದು, ಹೊರ ರಾಜ್ಯದ ನಿವಾಸಿ ಎಂದು ಶಂಕಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

15/08/2021 12:21 pm

Cinque Terre

3.91 K

Cinque Terre

0