ಕುಂದಾಪುರ : ಗುಜ್ಜಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳ ಯಕ್ಷಗಾನ ತರಗತಿಯನ್ನು ಯಕ್ಷಗಾನ ಕಲಾ ಪೋ?ಕ ರಾಮಚಂದ್ರ ನಾವಡ ಮುಳ್ಳಿಕಟ್ಟೆ ಶನಿವಾರ ಉದ್ಘಾಟಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಶಿಕ್ಷಕ, ಯಕ್ಷಗಾನ ಕಲಾವಿದ ಚಂದ್ರ ಹೆಬ್ಬಾರ್, ಜಿ. ಸುಬ್ಬ ನಾಯಕವಾಡಿ, ಯಕ್ಷಗುರು ಯೋಗೇಂದ್ರ ಆಚಾರ್ ಗುಜ್ಜಾಡಿ, ಉದಯೋನ್ಮುಖ ಭಾಗವತ ಶ್ರೀಪತಿ ಆಚಾರ್ ಗುಜ್ಜಾಡಿ, ಗುಜ್ಜಾಡಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಮೇಸ್ತ, ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಮನಾಥ ಚಿತ್ತಾಲ್, ಯುವ ಕಲಾವಿದ ಸುಧೀರ್ ಮೊಗವೀರ ಮಂಕಿ, ಎಸ್‌ಡಿಎಂಸಿ ಸದಸ್ಯರಾದ ಮಹೇಶ್ ಆಚಾರ್, ವಿಶ್ವನಾಥ ಮೇಸ್ತ, ರಮೇಶ್ ಬಿ.ಕೆ., ಸಹ ಶಿಕ್ಷಕರಾದ ಭಾರತಿ, ವಿಶಾಲಾಕ್ಷಿ, ನೇತ್ರಾವತಿ, ವಿಶ್ವನಾಥ ಹಾಗೂ ಗೌರವ ಶಿಕ್ಷಕಿಯರು ಉಪಸ್ಥಿತರಿದ್ದರು.
ಸಹಶಿಕ್ಷಕಿ ಮಾಧವಿ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಆನಂದ ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಹ ಶಿಕ್ಷಕಿಯರಾದ ಸುಮನ ಕಾರ್ಯಕ್ರಮ ನಿರೂಪಿಸಿ, ರೂಪ ಆಚಾರ್ ವಂದಿಸಿದರು.
Kshetra Samachara
10/09/2022 05:55 pm