ನಗರದ ಬೀಡಿನಗುಡ್ಡೆ ಸಮೀಪ ಖಾಸಗಿಯವರ ಬಾವಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವೃದ್ಧರೊಬ್ಬರ ಶವ ಪತ್ತೆಯಾಗಿರುವ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳಿಯ ನಿವಾಸಿ ಸಂಜೀವ (65) ಎಂದು ಗುರುತಿಸಲಾಗಿದೆ. ಮೃತರು ನಡೆದುಕೊಂಡು ಬರುವಾಗ ಆಯತಪ್ಪಿ ಆವರಣ ಇಲ್ಲದ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಅಗ್ನಿಶಾಮಕ ದಳ ಮತ್ತು ನಗರ ಪೋಲಿಸರು ಜಂಟಿ ಕಾರ್ಯಾಚರಣೆ ಮೂಲಕ ಶವವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಅಗ್ನಿಶಾಮಕ ದಳದ ಎಂ.ಎಂ ಗೌಸ್, ವಿನಾಯಕ ಕಲ್ಮನೆ, ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು.
Kshetra Samachara
24/05/2022 12:39 pm