ಕುಂದಾಪುರ : ಹೆಮ್ಮಾಡಿ ಸಮೀಪದ ಜಾಲಾಡಿ – ಸಂತೋಷನಗರ ಮಧ್ಯೆ “ಡಿವೈಡರ್ ಕ್ರಾಸಿಂಗ್’ಗೆ ಅನುಮತಿ ಕೊಡಲು ಹೆದ್ದಾರಿ ಪ್ರಾಧಿಕಾರ ನಿರಾಕರಿಸಿದೆ.
ಆದರೆ ಅಲ್ಲಿನ ಗ್ರಾಮಸ್ಥರು ಈ ಸಮಸ್ಯೆ ಬಗ್ಗೆ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಗಮನಕ್ಕೆ ತಂದಿದ್ದುಈ ಬಗ್ಗೆ ಕೂಡಲೇ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಮಾತನಾಡಿ, ಡಿವೈಡರ್ ಕ್ರಾಸಿಂಗ್ ಗೆ ಅನುಮತಿ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
ಜಾಲಾಡಿ ಹಾಗೂ ಸಂತೋಷನಗರದ ಜನ ಹೆಮ್ಮಾಡಿ ಸರ್ಕಲ್ ಅಥವಾ ತಲ್ಲೂರು ಜಂಕ್ಷನ್ ಗೆ ಹೋಗಿ ಬರಬೇಕು ಹಾಗಾಗಿ ಜನ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಪ್ರಯಾಣಿಸವುದು ಅನಿವಾರ್ಯವಾಗಿ,ಇದು ಅಪಾಯಕಾರಿಯಾಗಿದ್ದು, ಅನಿರೀಕ್ಷಿತ ಅವಘಡಗಳು ಸಂಭವಿಸುತ್ತಿವೆ.
ಈ ಕಾರಣಕ್ಕೆ ಹೆಮ್ಮಾಡಿ ಜಂಕ್ಷನ್ ನಿಂದ ಜಾಲಾಡಿಯವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು ಎನ್ನುವ ಬೇಡಿಕೆ ಇಲ್ಲಿನ ಜನರದ್ದಾಗಿದೆ.
Kshetra Samachara
29/09/2020 04:51 pm