ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಾಪುರ : "ವ್ಯವಸ್ಥೆಯಿಂದ ಭ್ರಷ್ಟಾಚಾರ ಹೊರಬಂದರೆ ಎಲ್ಲ ಸಮಸ್ಯೆಗೂ ಪರಿಹಾರ"

ಕುಂದಾಪುರ: ಜನರ ಕೈಗೆ ಅಧಿಕಾರ ಕೊಡಬೇಕು ಎನ್ನುವ ನಿಲುವು ಇದ್ದರೂ ಕೂಡ ಅದು ಪರಿಣಾಮಕಾರಿಯಾಗಿ ಅನುಷ್ಠಾನ ಆಗದೇ ಇರುವುದನ್ನು ಕಾಣುತ್ತೇವೆ.

ವ್ಯವಸ್ಥೆಯೊಳಗಿರುವ ಭ್ರಷ್ಟಾಚಾರ ಹೊರ ಬಂದರೆ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತದೆ. ಪಂ. ಪ್ರತಿನಿಧಿಗಳು ಕಾಯ್ದೆ ತಿಳಿದುಕೊಂಡು ತಮ್ಮ ಹಕ್ಕು, ಕರ್ತವ್ಯ ಪಾಲಿಸಬೇಕು.

ಆ ಹಿನ್ನೆಲೆಯಲ್ಲಿ ‘ಜನಾಧಿಕಾರ’ ಕೃತಿ ಮಾರ್ಗದರ್ಶಿಯಾಗಬಲ್ಲದು ಎಂದು ವಿಧಾನ ಪರಿಷತ್ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ ಹೇಳಿದರು.

ಗ್ರಾಪಂ ಹಕ್ಕೊತ್ತಾಯ ಆಂದೋಲನ ಮತ್ತು ಪಂಚಾಯತ್ ರಾಜ್ ಒಕ್ಕೂಟ ಸಹಕಾರದೊಂದಿಗೆ ಕುಂದಾಪುರ ತಾಪಂ ಸಭಾಭವನದಲ್ಲಿ ನಡೆದ ಜನಪ್ರತಿನಿಧಿ ಪ್ರಕಾಶನ ಕುಂದಾಪುರ ಪ್ರಕಟಿಸಿರುವ ಪಂಚಾಯತ್ ರಾಜ್ ತಜ್ಞ ಎಸ್.ಜನಾರ್ದನ ಮರವಂತೆ ಸಂಕಲಿಸಿರುವ ಜನಾಧಿಕಾರ ಗ್ರಾಪಂ ಮಾರ್ಗದರ್ಶಿ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸರಕಾರಗಳು ಜನಹಿತವಾಗಿ ಕೆಲಸ ಮಾಡಬೇಕು. ಆದರೆ, ಇವತ್ತು ಕೆಳಸ್ತರದಿಂದ ಲೋಕಸಭೆಯ ತನಕ ಮನಸ್ಸು ಬಿಚ್ಚಿ ಮಾತನಾಡುವ ಸ್ಥಿತಿ ಇದ್ದಂತಿಲ್ಲ.

ಕೆಲವೊಂದು ಬಾರಿ ಅಧಿಕಾರವನ್ನು ಅಧಿಕಾರಿಗಳು ಕಬಳಿಸುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತವೆ.

ರದ್ದು ಮಾಡುವುದು, ಒಪ್ಪದಿರುವುದು, ತಡೆ ಹಿಡಿಯುವುದು ಈ ಮೂರರ ಅಡಿಯಲ್ಲಿಯೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಆ ನಿಟ್ಟಿನಲ್ಲಿ ಪಂಚಾಯತ್ ವ್ಯವಸ್ಥೆಯಲ್ಲಿ ಕಾಯ್ದೆಗಳು ಪರಿಣಾಮಕಾರಿ ಅನುಷ್ಠಾನ ಆಗಬೇಕಾದ ಅಗತ್ಯತೆ ಇದೆ ಎಂದರು.

ಜನಾಧಿಕಾರ ಪುಸ್ತಕದಲ್ಲಿ ಎಸ್.ಜನಾರ್ದನ ಮರವಂತೆಯವರ ಆಶಾವಾದ ಕಾಣಬಹುದು.

Edited By : Nirmala Aralikatti
Kshetra Samachara

Kshetra Samachara

01/11/2020 09:53 am

Cinque Terre

5.55 K

Cinque Terre

2

ಸಂಬಂಧಿತ ಸುದ್ದಿ