ಉಡುಪಿ: ಹಥ್ರಾಸ್ ನಲ್ಲಿ ಯುವತಿ ಮೇಲೆ ನಡೆದ ಹೇಯ ಕೃತ್ಯ ಮತ್ತು ಬರ್ಬರ ಹತ್ಯೆ ಖಂಡಿಸಿ ಇಂದು ನಗರದ ಹುತಾತ್ಮ ಸ್ಮಾರಕದ ಬಳಿ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಉಡುಪಿ ಜಿಲ್ಲೆ, ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಉಡುಪಿ ಜಿಲ್ಲೆ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಮಹಿಳಾ ವಿಭಾಗ ವತಿಯಿಂದ ಜಂಟಿಯಾಗಿ ಪ್ರತಿಭಟನೆ ನಡೆಯಿತು.
ಸಾಮಾಜಿಕ ಕಾರ್ಯಕರ್ತೆ ವಿರೋನಿಕಾ ಕರ್ನೇಲಿಯೊ, ಎಸ್ ಐಒ ರಾಜ್ಯ ಕಾರ್ಯದರ್ಶಿ ಆಶೀಮ್ ಜವಾದ್, ಜಿಐಒ ರಾಜ್ಯಾಧ್ಯಕ್ಷೆ ಹುಮೈರಾ ಬಾನು, ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಜಿಲ್ಲಾ ಸಂಚಾಲಕಿ ಕುಲ್ಸುಮ್ ಅಬುಬಕರ್ ಮಾತನಾಡಿದರು.
ಎಸ್ ಐಒ ಜಿಲ್ಲಾಧ್ಯಕ್ಷ ನಾಸಿರ್ ಹೂಡೆ, ಜಿಐಒ ಜಿಲ್ಲಾಧ್ಯಕ್ಷೆ ಆಮ್ನ ಕೌಸರ್, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಜೀಜ್ ಉದ್ಯಾವರ್ ಉಪಸ್ಥಿತರಿದ್ದರು.
ಜಮಾಅತೆ ಇಸ್ಲಾಮಿ ಹಿಂದ್ ಉಡುಪಿ ಮಹಿಳಾ ವಿಭಾಗದ ಸಂಚಾಲಕಿ ಶಾಹಿದಾ ರಿಯಾಝ್ ನಿರೂಪಿಸಿ, ವಂದಿಸಿದರು.
Kshetra Samachara
10/10/2020 08:41 pm