ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಮದುಮಗಳ ಎತ್ತಿನ ಗಾಡಿ ಸವಾರಿಯ ದೃಶ್ಯ ಭಾರಿ ವೈರಲ್!

ಉಪ್ಪುಂದ: ಮದುಮಗಳೊಬ್ಬಳು ಮದುವೆ ಮಂಟಪಕ್ಕೆ ಎತ್ತಿನಗಾಡಿಯಲ್ಲಿ ಬಂದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಉಪ್ಪುಂದದ ಕಟ್ಟಿನಮನೆ ಬವಳಾಡಿ ಮಹಾಬಲ ಆಚಾರ್ಯರ ಪುತ್ರಿ ಪ್ರತಿಮಾ ಹಾಗೂ ಕಟ್ಟೆ ಬೆಲ್ತೂರು ಬಾಬು ಆಚಾರ್ಯ ಅವರ ಪುತ್ರ ಗುರುರಾಜ್ ವಿವಾಹ ಕಿರಿಮಂಜೇಶ್ವರದ ಆರ್ಕೆಡ್ ಚಿನ್ಮಯಿಯಲ್ಲಿ ನಡೆದಿತ್ತು. ಈ ವೇಳೆ ಮದುಮಗಳು ಸಾಂಪ್ರದಾಯಿಕ ರೀತಿಯಲ್ಲಿ ,ವಿಭಿನ್ನವಾಗಿ ಎತ್ತಿನ ಗಾಡಿ ಮೂಲಕ ಬಂದಿದ್ದಾಳೆ. ಮದು ಮಗಳು ಸಾಗಿ ಬಂದ ಸಂಭ್ರಮವನ್ನು ಸಾರ್ವಜನಿಕರು ಕಣ್ತುಂಬಿಕೊಂಡರು. ಸದ್ಯ ಮದುಮಗಳ ಎತ್ತಿನ ಗಾಡಿ ಸವಾರಿಯ ದೃಶ್ಯ ಬಾರೀ ವೈರಲ್ ಆಗಿದೆ.

Edited By : Shivu K
Kshetra Samachara

Kshetra Samachara

28/01/2022 04:35 pm

Cinque Terre

17.94 K

Cinque Terre

4