ಉಡುಪಿ: ಅ,9ರಂದು ಕೊಡಗಿನ ಕುಶಾಲನಗರದಲ್ಲಿ ನಡೆದ ರಾಜ್ಯಮಟ್ಟದ (ಸ್ಟೇಟ್ ಲೆವೆಲ್ ಓಪನ್ ಕರಾಟೆ ಕೊಡಗು ಕಪ್ )ಸ್ಪರ್ಧೆ ಯಲ್ಲಿ ಕಟ ಮತ್ತು ಕುಮಿಟೆ ವಿಭಾಗದಲ್ಲಿ ಎರಡರಲ್ಲೂ ಪ್ರಥಮ ಸ್ಥಾನವನ್ನು ಗೆಲ್ಲುವುದರ ಮೂಲಕ ಮತ್ತೆರಡು ಚಿನ್ನದ ಪಧಕವನ್ನು ಒಳಕಾಡು ಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ರಿಯಾ ಜಿ. ಶೆಟ್ಟಿ . ಗೆದ್ದಿದ್ದಾರೆ.ಇವರು ಹಾವಂಜೆ ಗ್ರಾಮದ ಕೀಳಂಜೆಯ ಗಣೇಶ್ ಶೆಟ್ಟಿ ಹಾಗೂ ಜಯಲಕ್ಷ್ಮಿ ಜಿ.ಶೆಟ್ಟಿ.ಯವರ ಪುತ್ರಿಯಾಗಿದ್ದಾರೆ. ಇವರು ಪಿಕೆಸಿ ಪರ್ಕಳ ತಂಡದ ಸದಸ್ಯರಾಗಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ
ವಿಜೇತೆ ಕರಾಟೆ ಶಿಕ್ಷಕಿ ಪ್ರವೀಣ ಪರ್ಕಳ ಅವರ ಶಿಷ್ಯೆ ಯಾಗಿದ್ದಾರೆ.
Kshetra Samachara
11/10/2022 03:18 pm