ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ವಿಭಾಗೀಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಖೋ-ಖೋ ಪಂದ್ಯಾಟ

ಬ್ರಹ್ಮಾವರ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಭಾಗಿಯ ಕಾರ್ಯದರ್ಶಿಗಳು ಹಾಗೂ ಪದನಿಮಿತ್ತ ಜಂಟಿ ಕಚೇರಿ ಮೈಸೂರು ವಿಭಾಗ ಉಡುಪಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಇದರ ಸಹಯೋಗದೊಂದಿಗೆ ವಿಭಾಗೀಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಖೋ-ಖೋ ಪಂದ್ಯಾಟ 2022 ಬ್ರಹ್ಮಾವರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಾಸಕ ರಘುಪತಿ ಭಟ್ ಸೋಮವಾರ ಚಾಲನೆ ನೀಡಿದರು.

ಸೋಮವಾರ ಮತ್ತು ಮಂಗಳವಾರ 2 ದಿನ 4 ಅಂಗಣದಲ್ಲಿ ನಡೆಯುವ ಹೊನಲು ಬೆಳಕಿನ ಪಂದ್ಯಾಟದಲ್ಲಿ ಮೈಸೂರು ವಿಭಾಗದ 32 ಶಾಲೆಯ 32 ತಂಡದಲ್ಲಿ 14 ವಯೋಮಾನದ ಬಾಲಕರ ಮತ್ತು ಬಾಲಕಿಯರ ತಲಾ 8 ತಂಡ ಮತ್ತು 17 ವಯೋಮಿತಿಯ ಬಾಲಕರ ಮತ್ತು ಬಾಲಕಿಯರ ತಲಾ 8 ತಂಡ ಆಗಮಿಸಿದ್ದು 150 ಕ್ರೀಡಾ ಅಧಿಕಾರಿಗಳು ಭಾಗವಹಿಸಿದ್ದಾರೆ.

ಬ್ರಹ್ಮಾವರ ತಾಲೂಕು ಖೋ-ಖೋ ಅಸೋಸಿಯೇಷನ್ ಅಧ್ಯಕ್ಷ ಸುದರ್ಶನ್ ಹೆಗ್ಡೆ, ಗಣ್ಯರಾದ ಬಿರ್ತಿ ರಾಜೇಶ್ ಶೆಟ್ಟಿ, ಭಾಸ್ಕರ್ ರೈ, ದೇವಾನಂದ್ ನಾಯಕ್, ಸದಾನಂದ ವಾರಂಬಳ್ಳಿ, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ರಘುನಾಥ್, ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್, ಪದ್ಮಾವತಿ, ಉಪ ಪ್ರಾಂಶುಪಾಲ ಬಿ.ಟಿ ನಾಯ್ಕ್ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

10/10/2022 08:58 pm

Cinque Terre

6.9 K

Cinque Terre

0

ಸಂಬಂಧಿತ ಸುದ್ದಿ