ಮಂಗಳೂರು: ಕೊಟ್ಟಾರಿ ಯುವ ವೇದಿಕೆ ಆಶ್ರಯದಲ್ಲಿ ನಡೆದ 3ನೇ ವರ್ಷದ ಕೊಟ್ಟಾರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಅದ್ಧೂರಿ ತೆರೆ ಬಿದ್ದಿದ್ದು, ಕೊಟ್ಟಾರಿ ಅಟ್ಟ್ಯಾಕರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
10 ತಂಡಗಳನ್ನು ಒಳಗೊಂಡ ಕ್ರಿಕೆಟ್ ಪಂದ್ಯಾಟದಲ್ಲಿ ಕೊಟ್ಟಾರಿ ಚಾಲೆಂಜರ್ಸ್ ಹಾಗೂ ಕೊಟ್ಟಾರಿ ಅ್ಯಟಕರ್ಸ್ ಫೈನಲ್ ಪ್ರವೇಶಿಸಿತ್ತು. ಫೈನಲ್ ನಲ್ಲಿ ಚಾಲೆಂಜರ್ಸ್ ತಂಡವನ್ನು ಸೋಲಿಸಿ ಅಟ್ಯಾಕರ್ಸ್ ತಂಡ ಈ ಬಾರಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಇನ್ನು ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಚಾಲೆಂಜರ್ಸ್ ತಂಡ ರನ್ನಸ್೯ ಆಗಿ ಪ್ರಶಸ್ತಿ ಗಿಟ್ಟಿಸಿಕೊಂಡಿದೆ. ಟೂರ್ನಿಯ ಪ್ರತಿ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಚಾಲೆಂಜರ್ಸ್ ತಂಡದ ಕಪ್ತಾನ ಸುಕೇಶ್ ಕೊಟ್ಟಾರಿ ಉತ್ತಮ ಬ್ಯಾಟರ್ ಪ್ರಶಸ್ತಿ ಪಡೆದರು. ಹಾಗೂ ಚಾಲೆಂಜರ್ಸ್ ತಂಡ ಅಶಿಸ್ ಕೊಟ್ಟಾರಿ ಉತ್ತಮ ಬೌಲರ್ಸ್ ಪ್ರಶಸ್ತಿ ಗಿಟ್ಟಿಸಿಕೊಂಡರು. ಅ್ಯಟಕರ್ಸ್ ತಂಡದ ಸಂದೀಪ್ ಗೆ ಪಂದ್ಯ ಶ್ರೇಷ್ಠ, ಅವಿನಾಶ್ ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಬಾರಿಯ ಕೆಪಿಎಲ್ ಪಂದ್ಯಾವಳಿಯಲ್ಲಿ ಹಿರಿಯರ ತಂಡ, ಮಕ್ಕಳ ತಂಡ ಸೇರಿದಂತೆ ಮಹಿಳೆಯರಿಗೆ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.ಇನ್ನೂ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಹಿರಿಯರು ಸೇರಿದಂತೆ ಅನೇಕ ಮಂದಿ ಕೊಟ್ಟಾರಿ ಸಮಾಜ ಭಾಂಧವರು ಭಾಗವಹಿಸಿದ್ದರು.
PublicNext
03/05/2022 08:23 pm