ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಎಕ್ಕಾರು ಪ್ರೀಮಿಯರ್ ಲೀಗ್ -2022 ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ

ಬಜಪೆ:ಕ್ರೀಡೆಯ ಜೊತೆಗೆ ಯುವಕರನ್ನು ಒಟ್ಟುಗೂಡಿಸಿಕೊಂಡು ಊರಿನ ಅಭಿವೃದ್ದಿ ಹಾಗೂ ಆಶಕ್ತರಿಗೆ ಸಹಾಯಹಸ್ತ ನೀಡಿ,ಹೊಸ ಹೊಸ ಪ್ರತಿಭೆಗಳಿಗೆ ಸಹಕಾರ ನೀಡುತ್ತ ಬಂದಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಹೇಳಿದರು.

ಅವರು ಇಂದು ದುರ್ಗಾ ಕಲ್ಚರಲ್ & ಕ್ರಿಕೆಟ್ ಕ್ಲಬ್ ಎಕ್ಕಾರು ಇದರ ಆಶ್ರಯದಲ್ಲಿ ಎಕ್ಕಾರು ಪ್ರೀಮಿಯರ್ ಲೀಗ್ -2022 ಅಂಡರ್ ಅರ್ಮ್ ಕ್ರಿಕೆಟ್ ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಾಮಾಜಿಕ ನ್ಯಾಯ ಹಕ್ಕುಗಳ ಸಬಲೀಕರಣ ಸಚಿವಾಲಯ ಡಿ.ಎನ್ .ಟಿ ಅಬಿವೃದ್ದಿ ಪ್ರಾಧಿಕಾರದ ಸದಸ್ಯ ಕೆ.ಭಾಸ್ಕರ್ ದಾಸ್ ಅವರು ವಹಿಸಿದ್ದರು.

ಈ ಸಂದರ್ಭ ಎಕ್ಕಾರು ಕೊಡಮಣೆತ್ತಾಯ ದೈವಸ್ಥಾನದ ಆಡಳಿತ ಮೊಕ್ತೇಸರ ನಿತಿನ್ ಹೆಗ್ಡೆ ಕಾವರಮನೆ(ತಿಮ್ಮ ಕಾವ),ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ರೈ,ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ರತ್ನಾಕರ ಶೆಟ್ಟಿ,ಚಲನ ಚಿತ್ರ ನಟ,ನಿರ್ಮಾಪಕ ವೀರೇಂದ್ರ ಶೆಟ್ಟಿ ಕಾವೂರು, ಗ್ರಾಮ ಪಂಚಾಯತ್ ನ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Edited By :
Kshetra Samachara

Kshetra Samachara

16/04/2022 01:50 pm

Cinque Terre

7.7 K

Cinque Terre

0

ಸಂಬಂಧಿತ ಸುದ್ದಿ