ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ನಾಡ್: ಫ್ರೆಂಡ್ಸ್ ಕೊಲ್ನಾಡು ಟ್ರೋಪಿ-2021: ರೇಂಜರ್ಸ್ ಬೊಳ್ಳೂರು ತಂಡಕ್ಕೆ

ಮುಲ್ಕಿ: ಮುಲ್ಕಿ ಸಮೀಪದ ಕಾರ್ನಾಡು ಗಾಂಧಿ ಮೈದಾನದಲ್ಲಿ ಫ್ರೆಂಡ್ಸ್ ಕೊಲ್ನಾಡು ವತಿಯಿಂದ ನಡೆದ ನಿಗದಿತ ಓವರುಗಳ ಕ್ರಿಕೆಟ್ ಪಂದ್ಯಾಟದಲ್ಲಿ ಹಳೆಯಂಗಡಿಯ ರೇಂಜರ್ಸ್ ಬೊಳ್ಳೂರು ಕ್ರಿಕೆಟರ್ಸ್ ಪ್ರಥಮ ಬಹುಮಾನ ಹಾಗೂ ಫ್ರೆಂಡ್ಸ್ ಕೊಲ್ನಾಡು ಟ್ರೋಪಿ 2021 ಗಳಿಸಿದರೆ ದುರ್ಗಾಂಬಾ ಕ್ರಿಕೆಟರ್ಸ್ ತಡಂಬೈಲ್ ತಂಡ ದ್ವಿತೀಯ ಬಹುಮಾನ ಹಾಗೂ ಟ್ರೋಪಿ ಪಡೆದುಕೊಂಡಿತು.

ಅಂತಿಮ ಪಂದ್ಯದ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಯನ್ನು ರೇಂಜರ್ಸ್ ಬೊಳ್ಳೂರು ತಂಡದ ಅಜೀಜ್, ಅನೀಸ್ ಪಡೆದರೆ ಉತ್ತಮ ದಾಂಡಿಗ ಹಾಗೂ ಎಸೆತಗಾರ ಪ್ರಶಸ್ತಿಯನ್ನು ದುರ್ಗಾಂಬಾ ಕ್ರಿಕೆಟರ್ಸ್ ತಡಂಬೈಲ್ ತಂಡದ ಶ್ರೇಯಸ್ ಹಾಗೂ ಸಂಪತ್ ಪಡೆದರು.

ಟೂರ್ನಿಯಲ್ಲಿ ಶಿಸ್ತುಬದ್ಧ ತಂಡವಾಗಿ ಮಿತ್ರನ್ ಮುಲ್ಕಿ ಹೊರಹೊಮ್ಮಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆಯಲ್ಲಿ ಮುಲ್ಕಿ ನಗರ ಪಂಚಾಯತ್ ಸದಸ್ಯರಾದ ಪುತ್ತುಬಾವ, ಮಾಜಿ ಸದಸ್ಯ ಬಶೀರ್ ಕುಳಾಯಿ, ಉದ್ಯಮಿ ಸಮೀರ್ ಎ. ಎಚ್. ಪತ್ರಕರ್ತ ಪುನೀತ್ ಕೃಷ್ಣ ಉಪಸ್ಥಿತರಿದ್ದರು.

ಸುಮಾರು 30 ತಂಡಗಳು ವಲಯ ಹಾಗೂ ಜಿಲ್ಲಾಮಟ್ಟದ ಮೂರು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿದ್ದವು.

ಹಸನ್ ಕೊಲ್ನಾಡು ನಿರೂಪಿಸಿದರು.

Edited By :
Kshetra Samachara

Kshetra Samachara

20/12/2021 01:02 pm

Cinque Terre

9.64 K

Cinque Terre

0

ಸಂಬಂಧಿತ ಸುದ್ದಿ