ಮಂಗಳೂರು: ಭಾರತೀಯ ಭೂಸೇನೆಯ ಬಾರ್ಡರ್ ರೋಡ್ ಆರ್ಗನೈಸೇಶನ್ (ಬಿಆರ್ ಒ) ಸಂಸ್ಥೆ ಹಮ್ಮಿಕೊಂಡಿರುವ ಇಂಡಿಯಾ @ 75 ಬಿಆರ್ ಒ ಮೋಟರ್ ಸೈಕಲ್ ಎಕ್ಸ್ ಪೆಡಿಷನ್ 2021 ಮೋಟಾರ್ ಬೈಕ್ ರ್ಯಾಲಿಯು ಡಿ.12ರಂದು ಬೆಳಗ್ಗೆ 11.30ಕ್ಕೆ ಮಂಗಳೂರಿನ ಕೆನರಾ ಶಿಕ್ಷಣ ಸಂಸ್ಥೆಯ ಸುಧೀಂದ್ರ ಸಭಾಂಗಣದಲ್ಲಿ ನಡೆಯಲಿದೆ.
ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ನಿಟ್ಟಿನಲ್ಲಿ ದೇಶದ ಗಡಿಯುದ್ದಕ್ಕೂ ಉತ್ತಮ ಗುಣಮಟ್ಟದ ರಸ್ತೆ ಸೇರಿದಂತೆ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ತನ್ನನ್ನು ತೊಡಗಿಸಿರುವ ಸಂಸ್ಥೆಯಾದ ಬಿಆರ್ ಒ, ಈ ಇಂಡಿಯಾ @ 75 ಬಿಆರ್ ಒ ಮೋಟರ್ ಸೈಕಲ್ ಎಕ್ಸ್ ಪೆಡಿಷನ್ 2021 ಮೋಟಾರ್ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ. ದೇಶದ ಎಲ್ಲಾ ರಾಜ್ಯಗಳನ್ನು ಸಂಪರ್ಕಿಸುವಂತೆ 75 ದಿನಗಳಲ್ಲಿ 20 ಸಾವಿರ ಕಿ.ಮೀ.ನಷ್ಟು ಉದ್ದದ ಮೋಟಾರು ಬೈಕ್ ರ್ಯಾಲಿಯನ್ನು 6 ತಂಡಗಳಲ್ಲಿ ಹಮ್ಮಿಕೊಂಡಿದೆ. 6ನೇ ತಂಡವು ಕೇರಳದಿಂದ ಕರ್ನಾಟಕವನ್ನು ಮಂಗಳೂರು ಮೂಲಕ ಡಿ.11ರಂದು ಪ್ರವೇಶಿಸಲಿದೆ.
ಈ ರ್ಯಾಲಿಯಲ್ಲಿ 75 ಬೈಕ್ ಗಳು 75 ದಿನಗಳಲ್ಲಿ ದೇಶದ ಉದ್ದಗಲಕ್ಕೂ 20 ಸಾವಿರ ಕಿ.ಮೀ. ಕ್ರಮಿಸಲಿದೆ. ಕರ್ನಾಟಕ ರಾಜ್ಯದಲ್ಲಿ ಈ ಬೈಕ್ ರ್ಯಾಲಿ ದ.ಕ., ಉಡುಪಿ ಹಾಗೂ ಉ.ಕ.ವನ್ನು ಹಾದು ಹೋಗಲಿದೆ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.
Kshetra Samachara
10/12/2021 03:13 pm