ಉಡುಪಿ: ಸ್ವಸ್ಥ ಸಮಾಜದ ಆರೋಗ್ಯ, ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಗೃಹರಕ್ಷಕರ ಉತ್ತಮ ಸೇವೆ ಸಮಾಜದ ಅರಿವಿಗೆ ಬರುವಂತೆ ಮಾಡಬೇಕು ಎಂದು ರಾಜ್ಯ ಅಗ್ನಿ ಶಾಮಕ ಮತ್ತು ತುರ್ತು ಸೇವೆಗಳ ಆರಕ್ಷಕ ಉಪ ಮಹಾನಿರೀಕ್ಷಕ ಕೆ.ಟಿ.ಬಾಲಕೃಷ್ಣ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಪೊಲೀಸ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡುತಿದ್ದರು.
ಪಶ್ಚಿಮ ವಲಯ ವ್ಯಾಪ್ತಿಯಲ್ಲಿ ಗೃಹ ರಕ್ಷಕ ದಳದ ಘಟಕಗಳು ಕಡಿಮೆ ಸಂಖ್ಯೆಯಲ್ಲಿದ್ದು ಇದನ್ನು ಹೆಚ್ಚಿಸಬೇಕಾಗಿದೆ. ಬೆಂಗಳೂರು ನಗರದ ಸುಮಾರು ಐದು ಸಾವಿರ ಗೃಹರಕ್ಷಕರನ್ನು ಕೋವಿಡ್ ಸಾಂಕ್ರಾಮಿಕದ ಕೆಲಸಕ್ಕೆ ಸಮಗ್ರವಾಗಿ ಬಳಸಿಕೊಳ್ಳಲಾಗಿದೆ. ಇವರಲ್ಲಿ ಹಲವರ ಸಾವೂ ಸಂಭವಿಸಿದೆ ಎಂದ ಅವರು, ಗೃಹರಕ್ಷಕರ ಪ್ರತಿಭೆ, ಸಾಮರ್ಥ್ಯ ತೋರಲು ಇಂಥಾ ಕ್ರೀಡಾಕೂಟ ಸಹಕಾರಿ ಎಂದರು.
ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಕೆ. ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಕ್ರೀಡಾಪಟು ಅಕ್ಷತಾ ಪೂಜಾರಿ ಉಪಸ್ಥಿತರಿದ್ದರು.
ಗೃಹ ರಕ್ಷಕ ದಳ ಸೆಕೆಂಡ್ ಇನ್ ಕಮಾಂಡ್ ಕೆ. ಸಿ. ರಾಜೇಶ್ ಸ್ವಾಗತಿಸಿದರು. ಸಾಯಿನಾಥ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿ, ಡೆಪ್ಯುಟಿ ಮಾಂಡೆಂಟ್ ರಮೇಶ್ ವಂದಿಸಿದರು.
Kshetra Samachara
04/12/2021 05:34 pm