ಮಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಜೂನಿಯರ್ ಮತ್ತು ಸಬ್ ಜೂನಿಯರ್ ಚಾಂಪಿಯನ್ ಶಿಪ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಈಜುಪಟುಗಳು 33 ಪದಕಗಳನ್ನು ಬೇಟೆಯಾಡಿದ್ದಾರೆ. ಈ ಮೂಲಕ ಅ.10ರಂದು ನಡೆಯುವ ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ವಿಜೇತರ ಪೈಕಿ ಎಲಿಸ್ಸಾ ಎಸ್. ರೇಗೊ ವೈಯುಕ್ತಿಕ ಚಾಂಪಿಯನ್ ಶಿಪ್ ಗೆದ್ದರೆ, ಧೃತಿ ಫರ್ನಾಂಡೀಸ್ ಕೂಟ ದಾಖಲೆ ಸೃಷ್ಟಿಸಿದ್ದಾರೆ. ಉಳಿದಂತೆ ನೈತಿಕ್ ಎನ್., ದ್ವಿಶಾ ಎನ್.ಶೆಟ್ಟಿ, ಅಲೆಸ್ಟರ್ ಎಸ್. ರೇಗೊ, ಸ್ಟೀವ್ ಜೆಫ್ ಲೋಬೊ, ದಿಗಂತ್ ವಿ.ಎಸ್. ವಿವಿಧ ವಿಭಾಗಗಳಲ್ಲಿ ಪದಕ ವಿಜೇತರಾಗಿದ್ದಾರೆ. ಈ ಏಳು ಈಜುಪಟುಗಳು ತಲಾ 13 ಬಂಗಾರ, 13 ಬೆಳ್ಳಿ ಹಾಗೂ 7 ಕಂಚು ವಿಭಾಗಗಳಲ್ಲಿ ಪದಕ ಬೇಟೆಯಾಡಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಸಂತ ಅಲೋಶಿಯಸ್ ವಿ ವನ್ ಎಕ್ವಾ ಸೆಂಟರ್ ಮತ್ತು ಡಾಲ್ಫಿನ್ ಆಕ್ಟಿಕ್ ಕ್ಲಬ್ ನ ಈಜು ತರಬೇತುದಾರರು ತರಬೇತಿ ನೀಡಿದ್ದಾರೆ.
Kshetra Samachara
05/10/2021 09:15 am