ಮೂಡುಬಿದಿರೆ: ಹಿಂದು ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು, ಭೂತರಾಜ ಗುಡ್ಡೆ ಘಟಕ ಕೆಲ್ಲಪುತ್ತಿಗೆ ಇದರ ಆಶ್ರಯದಲ್ಲಿ ಕೆಲ್ಲಪುತ್ತಿಗೆಯ ಎದೋಟ್ಟು ಬರ್ಕೆ ಗದ್ದೆಯಲ್ಲಿ ಆಟೋಟ ಸ್ಪರ್ಧೆ ಕೆಸರ್ಡ್ ಗೊಬ್ಬು 2021 ಆಟೋಟ ಸ್ಪರ್ಧೆ ನಡೆಯಿತು.
ಎಸ್ .ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕ ಭಾಸ್ಕರ್ ಎಸ್.ಕೋಟ್ಯಾನ್ ಉದ್ಘಾಟಿಸಿದರು.ಧರ್ಮ, ಗೋವು ಮತ್ತು ಯುವತಿಯ ರಕ್ಷಣೆಯ ಸಂದರ್ಭದಲ್ಲಿ ಹಿಂದು ಸಂಘಟನೆಯ ಯುವಕರ ಮೇಲೆ ಹಲವು ಕೇಸುಗಳು ದಾಖಲಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಂಘಟನೆಯಲ್ಲಿರುವ ವಕೀಲರುಗಳು ಸ್ಪಂದಿಸಿ ಯುವಕರಿಗೆ ಕಡಿಮೆ ಖರ್ಚಿನಲ್ಲಿ ಶೀಘ್ರ ನ್ಯಾಯ ಒದಗಿಸುವಂತೆ ಮಾಡಬೇಕು ಎಂದರು.
ಹಿಂ.ಜಾ.ವೇದಿಕೆಯ ಮೂಡುಬಿದಿರೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ್ ಸುವರ್ಣ ಅಧ್ಯಕ್ಷತೆವಹಿಸಿದರು.
ವಾಗ್ಮಿ ಕೇದಿಲ ಗಣರಾಜ ಭಟ್ ದಿಕ್ಸೂಚಿ ಭಾಷಣ ಮಾಡಿದರು.
ಕರ್ನಾಟಕ ರಾಜ್ಯ ಫೆಡರೇಶನ್ ಆಫ್ ಕ್ವಾರಿ-ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ರವೀಂದ್ರ ಬಜಗೋಳಿ ಅವರನ್ನು ಸನ್ಮಾನಿಸಲಾಯಿತು. ವಕೀಲೆ ವಿಜೇತಾ ಸನತ್, ಪ್ರಗತಿಪರ ಕೃಷಿಕ ಅಶೋಕ್ ಶೆಟ್ಟಿ, ಎದೋಟ್ಟು ಬರ್ಕೆ ಗುಮ್ಮಣ್ಣ ಪೂಜಾರಿ, ಹಿಂ.ಜಾ.ವೇದಿಕೆಯ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಉಪಾಧ್ಯಕ್ಷ ಹರೀಸ್ ಆಂಬ್ಲಮೊಗರು, ಪ್ರಚಾರ ಪ್ರಮುಖ್ ಸಂದೀಪ್ ಪಂಪುವೆಲ್, ತಾಲೂಕು ಅಧ್ಯಕ್ಷ ಸಮಿತ್ ರಾಜ್ ದರೆಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/09/2021 06:55 pm