ಕೋಟ: ಮಧುವನ ಅಚ್ಲಾಡಿ ಯುವಕ ಮಂಡಲದ ವತಿಯಿಂದ 4ನೇ ಬಾರಿ ಹೊನಲು ಬೆಳಕಿನ ಮಧುವನ ವಾಲಿಬಾಲ್ ಪ್ರೀಮಿಯರ್ ಲೀಗ್ -2021 ಆಯೋಜಿಸಲಾಗಿದೆ.
ಬನ್ನಾಡಿ ದಿನಕರ ಶೆಟ್ಟಿ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಮಧುವನ ಯುವಕರ ತಂಡ ಇಂದಿಗೂ ಯುವ ಪೀಳಿಗೆಗೆ ಮಾದರಿ. ಕೊರೊನಾ ಆರಂಭದ ಸಮಯದಲ್ಲಿ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ರಕ್ತದಾನ ಮಾಡಿ ಅನೇಕ ಜನರಿಗೆ ನೆರವಾಗಿದ್ದಾರೆ ಎಂದು ಶ್ಲಾಘಿಸಿದರು.ನಂತರ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿ,ಕ್ರೀಡೆಯಿಂದ ಸಂಘಟನೆ ಸಾಧ್ಯ. ಸಮಾಜಮುಖಿ ಕೆಲಸ ಮಾಡುವುದೇ ನಮ್ಮ ಗುರಿ ಎಂದರು.
ಮಧುವನ ವಾಲಿಬಾಲ್ ಪ್ರೀಮಿಯರ್ ಲೀಗ್ ನಲ್ಲಿ ಸ್ಥಳೀಯ ಆಟಗಾರರನ್ನು ಒಟ್ಟುಗೂಡಿಸಿ 5 ತಂಡಗಳನ್ನಾಗಿ ಮಾಡಿ 5 ಮಂದಿ ಆಹ್ವಾನಿತ ಅಟಗಾರರನ್ನು ಸೇರಿಸಿ ಲೀಗ್ ಮಾದರಿ ಪಂದ್ಯಾವಳಿ ನಡೆಯಿತು.
Kshetra Samachara
11/02/2021 11:32 am