ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಆಯ್ಕೆ ಮಂಡಳಿ ತಾರತಮ್ಯದಿಂದ ಯುವ ಕ್ರಿಕೆಟಿಗನಿಗೆ ಅನ್ಯಾಯ"

ಮಂಗಳೂರು: ಆಯ್ಕೆ ಮಂಡಳಿಯ ತಾರತಮ್ಯದಿಂದ ಯುವ ಕ್ರಿಕೆಟಿಗನಿಗೆ ಅನ್ಯಾಯ ಆಗಿದೆ ಎಂದು ಮಾಜಿ ಗೋವಾ ರಣಜಿ ಆಟಗಾರ ದಯಾನಂದ ಬಂಗೇರ ಆರೋಪಿಸಿದ್ದಾರೆ.

ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಗಳೂರು ಜೋನ್ 19ರ ಒಳಗಿನ ಕ್ರಿಕೆಟ್ ಸೆಲೆಕ್ಷನ್ ನಡೆಯುತ್ತಿದ್ದು, ಆದರೆ ಆಯ್ಕೆ ಸಮಿತಿ ಕೇವಲ ಕ್ಲಬ್ ಬದಲಾವಣೆ ಗುರಿಯಾಗಿಸಿ ಕೋಚ್ ಹಾಗೂ ಆಯ್ಕೆಯ ಸೂತ್ರಧಾರ ಜಯರಾಜ್, ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ ರವೀಂದ್ ಸುಧೀರ್ ಅವರನ್ನು ಸಂಪೂರ್ಣ ಕಡೆಗಣಿಸಿ ಆಯ್ಕೆ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಈ ಮೂಲಕ ಆತನ ಕ್ರಿಕೆಟ್ ಭವಿಷ್ಯವನ್ನೇ ಚಿವುಟಿ ಹಾಕಿದ್ದಾರೆ ಎಂದು ದೂರಿದ್ದಾರೆ‌.

ನಿಯಮದ ಪ್ರಕಾರ ತಂಡಕ್ಕೆ ಆಯ್ಕೆ ಮಾಡುವ ಸಂದರ್ಭ ಟ್ರಾಯಲ್ ಗೆಂದು ಕರೆಯುವಂತಿಲ್ಲ‌. ಮಂಗಳೂರಿನ 19ರ ಒಳಗಿನ ಆಟಗಾರರ ಕಾರ್ಯಕ್ಷಮತೆಯ ಬಗ್ಗೆ ಎಲ್ಲ ಮಾಹಿತಿ ಆಯ್ಕೆ ಸಮಿತಿಯಲ್ಲಿರಬೇಕು. ಅದರ ಆಧಾರದ ಮೇಲೆ ಆಟಗಾರರ ಆಯ್ಕೆ ನಡೆಯಬೇಕು. ಆದರೆ, ಆಯ್ಕೆ ಸಮಿತಿ ತನ್ನ ತಪ್ಪು ನಿರ್ಧಾರದಿಂದ ಕ್ರಿಕೆಟ್ ಆಟಗಾರರ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ತಾನು ಹಿರಿಯ ಕ್ರಿಕೆಟ್ ಆಟಗಾರ ರೋಜರ್ ಬಿನ್ನಿ ಹಾಗೂ ಕೆಎಸ್ ಸಿಎ ಅಧ್ಯಕ್ಷರಿಗೂ ಈಗಾಗಲೇ ಈ ಮೇಲ್ ಮೂಲಕ ಪತ್ರ ಬರೆದಿದ್ದೇನೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇನೆ ಎಂದು ದಯಾನಂದ ಬಂಗೇರ ಹೇಳಿದರು.

Edited By : Manjunath H D
Kshetra Samachara

Kshetra Samachara

05/02/2021 05:16 pm

Cinque Terre

8.6 K

Cinque Terre

0

ಸಂಬಂಧಿತ ಸುದ್ದಿ