ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: 9ರ ಹರೆಯದ ಬಾಲಕನಿಗೆ ಕಂಬಳ ಅಂಗಣದಲ್ಲಿ ಮಿಂಚುವ ತವಕ!

ಕಾರ್ಕಳ: 9ರ ಹರೆಯದ ಬಾಲಕನೊಬ್ಬ ಕೋಣದ ಬಾಲ ಹಿಡಿದು ಓಡುವ ಮೂಲಕ ಕಂಬಳ ಓಟದ ಅಖಾಡಕ್ಕಿಳಿಯಲು ಆಸೆ ಕಂಗಳಿಂದ ಎದಿರು ನೋಡುತ್ತಿದ್ದಾನೆ!

ಕಾರ್ಕಳ ತಾಲೂಕಿನ ಬಜಗೋಳಿ ಗ್ರಾಮದ ಮಂಜಲ್‌‌‌ಬೆಟ್ಟುವಿನ ಸುಹಾಸ್‌‌ ಪ್ರಭು- ಅಮೃತ ದಂಪತಿ ಪುತ್ರ ಅತಿಶ್‌ ಪ್ರಭು(9) ಕಂಬಳ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ಬಾಲ ಪ್ರತಿಭೆ.

ಅತಿಶ್‌, ಕಾರ್ಕಳದ ಎಸ್‌ವಿಟಿ ಶಾಲೆಯ 4ನೇ ಇಯತ್ತೆ ವಿದ್ಯಾರ್ಥಿ. ಕಂಬಳ ಅಂಗಣದ ಖ್ಯಾತ ಓಟಗಾರ ಶ್ರೀನಿವಾಸ ಗೌಡ ಅವರ ಮಿಂಚಿನ ಓಟ ಕಂಡು ಈತನಿಗೂ ತಾನು ಅವರಂತೆಯೇ ಕಂಬಳದ ಯಶಸ್ವಿ ಓಟಗಾರನಾಗಬೇಕೆಂಬ ಆಸೆ- ಆಕಾಂಕ್ಷೆ ಮೂಡಿತು.

ಅತಿಶ್‌ ಮನೆಯಲ್ಲಿ 3 ಕೋಣಗಳಿದ್ದು, ಈ "ವೇಗ ದೂತ" ರನ್ನು ಸ್ನಾನ ಮಾಡಿಸಲು ಈತನೇ ಕರೆದೊಯ್ಯುತ್ತಾನೆ. ಹಾಗೆಯೇ ಮನೆಗೆ ವಾಪಸ್ ಬರುವಾಗ ಅತಿಶ್‌ ಕೋಣಗಳ ಜೊತೆ ಓಡುವುದನ್ನೂ ಅಭ್ಯಸಿಸಿದ್ದಾನೆ. ಜತೆಗೆ ಈತ ಕಂಬಳ ಓಟಗಾರರಂತೆಯೇ ಹಾವಭಾವ ತೋರ್ಪಡಿಸುತ್ತಾನೆ, ಬಟ್ಟೆ ಧರಿಸುತ್ತಾನೆ. ತಮ್ಮ ಮಗನ ಕಂಬಳ ಪ್ರೀತಿ- ಅಭಿಮಾನಕ್ಕೆ ಹೆತ್ತವರೂ ಕೂಡ ಖುಷಿ ವ್ಯಕ್ತಪಡಿಸಿ, ಬೆಂಬಲಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

30/01/2021 10:16 pm

Cinque Terre

17.65 K

Cinque Terre

4

ಸಂಬಂಧಿತ ಸುದ್ದಿ