ಬಜಪೆ: ಕ್ರಿಕೆಟ್ ಆಟಗಾರ ಮನೀಶ್ ಪಾಂಡೆ ಹಾಗೂ ಅವರ ಪತ್ನಿ ಆಶ್ರಿತಾ ಶೆಟ್ಟಿ ಇಂದು ಗುರುಪುರ ಬಡಕರೆಯಲ್ಲಿರುವ ಆಶ್ರಿತಾರ ಗುತ್ತಿನ ಮನೆ ಹಾಗೂ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೈವ- ದೇವರ ದರ್ಶನ ಪಡೆದರು. ಅರ್ಚಕ ಜಿ.ಕೆ. ಕೃಷ್ಣ ಭಟ್ ಅವರು ಪ್ರಾರ್ಥನೆ ಸಲ್ಲಿಸಿ, ದೇವರ ಪ್ರಸಾದ ನೀಡಿದರು.
ಪಾಂಡೆ ದಂಪತಿಯೊಂದಿಗೆ ಆಶ್ರಿತಾ ಶೆಟ್ಟಿಯವರ ಮಾವ, ಗುರುಪುರ ಕೊಳದಬದಿ ಶ್ರೀ ಸದಾಶಿವ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಬಡಕರೆಗುತ್ತು, ಅವರ ಪತ್ನಿ ಚೇತನಾ ಜೆ.ಶೆಟ್ಟಿ ಕಡಂದಲೆ, ಬೆಳ್ಳಿಬೆಟ್ಟುಗುತ್ತು ಸತೀಶ್ ಕಾವ, ಗುರುಪುರ ಪಂಚಾಯಿತಿ ಸದಸ್ಯ ಸುನಿಲ್ ಜಲ್ಲಿಗುಡ್ಡೆ ಹಾಜರಿದ್ದರು.
Kshetra Samachara
27/12/2021 06:55 pm