ಕುಂದಾಪುರ: ಶ್ರೀ ನಾರಾಯಣಗುರು ಯುವಕ ಮಂಡಲ (ರಿ) ಕುಂದಾಪುರ ಇವರ 45ನೇ ವರ್ಷದ ಕುಂದಾಪುರ ದಸರಾ ಅಂಗವಾಗಿ ಹಮ್ಮಿಕೊಂಡ 21ನೇ ವರ್ಷದ ಕ್ರಿಕೆಟ್ ಪಂದ್ಯಾಟ ಟಿ.ಕೆ ಕೋಟ್ಯಾನ್ ಟ್ರೋಫಿ-2022 ನ್ನು ಶೇಖರ ಬಿಲ್ಲವ ಹೇರಿಕುದ್ರು ಉದ್ಘಾಟಿಸಿದರು.
ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಅಶೋಕ್ ಪೂಜಾರಿ ಬೀಜಾಡಿ, ದೇವರಾಜ್ ಪೂಜಾರಿ ತಲ್ಲೂರು ಉಪಸ್ಥಿತರಿದ್ದರು, ಭಾಸ್ಕರ್ ವಿಠಲವಾಡಿ ಕಾರ್ಯಕ್ರಮ ನಿರೂಪಿಸಿದರು. ಹಟ್ಟಿಕುದ್ರು ಕರ್ಕಿ ತಂಡ ಪ್ರಥಮ ಹಾಗೂ ಶ್ರೀ ಕಾಳಿಕಾಂಬ ಕೋಣಿ ದ್ವಿತೀಯ ಸ್ಥಾನ ಪಡೆದುಕೊಂಡರು.
Kshetra Samachara
06/09/2022 05:02 pm