ಮೂಡುಬಿದಿರೆ: ಫ್ರೆಂಡ್ಸ್ ವಾಲ್ಪಾಡಿ ಕ್ರಿಕೆಟ್ ತಂಡ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ `ವಾಲ್ಪಾಡಿ ಟ್ರೋಫಿ' ಕ್ರಿಕೆಟ್ ಪಂದ್ಯಾಟದಲ್ಲಿ ವಿಜೇತರಾದ ತಂಡಗಳಿಗೆ ಟ್ರೋಫಿ, ನಗದು ಜೊತೆಗೆ ಎರಡೂ ತಂಡಗಳ ಆಟಗಾರರಿಗೆ ಹೆಲ್ಮೆಟ್ ಹಾಗೂ ಈರುಳ್ಳಿಯ ಬಹುಮಾನ ನೀಡಿ ಗಮನಸೆಳೆದಿದೆ.
ಜಾವೆದ್ ಶೇಖ್ ಅವರ ಪ್ರಾಯೋಜಕತ್ವದಲ್ಲಿ 22 ಮಂದಿ ಆಟಗಾರರಿಗೆ ಹೆಲ್ಮೆಟ್ ಮತ್ತು ರಘುನಾಥ್ ಮೂಡುಬಿದಿರೆ, ಹರೀಶ ಮಾಂಟ್ರಾಡಿ ಪ್ರಾಯೋಜಕತ್ವದಲ್ಲಿ ಈರುಳ್ಳಿಯ ಬಹುಮಾನ ನೀಡಲಾಯಿತು.
ಟೀಮ್ ಯುನೈಟೆಡ್ ತಂಡ ಪ್ರಥಮ ಹಾಗೂ ಶ್ರೀದೇವಿ ಕೊಡ್ಯಡ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಟೀಮ್ ಯುನೈಟೆಡ್ ತಂಡದ ಶಾರೂಕ್ ಪಂದ್ಯ ಶ್ರೇಷ್ಠ ಹಾಗೂ ಇಕ್ಬಾಲ್ ಉತ್ತಮ ಎಸೆತಗಾರ ಪ್ರಶಸ್ತಿ ಪಡೆದುಕೊಂಡರೆ ಕೊಡ್ಯಡ್ಕ ತಂಡದ ಪ್ರಮೋದ್ ಸರಣಿ ಶ್ರೇಷ್ಠ ಹಾಗೂ ಸಾಗರ್ ಉತ್ತಮ ಕ್ಷೇತ್ರ ರಕ್ಷಕ ಪ್ರಶಸ್ತಿ ಪಡೆದುಕೊಂಡರು.
ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್, ಜಾವೆದ್ ಶೇಖ್, ಪತ್ರಕರ್ತರ ಸಂಘದ ಅಧ್ಯಕ್ಷ ವೇಣುಗೋಪಾಲ್, ಮಾರಿಗುಡಿ ತಂಡದ ರಘುನಾಥ್, ಚಿಕನ್ ಸೆಂಟರ್‍ನ ಮಾಲಕ ಅಲ್ತಾಫ್, ಪುರಸಭಾ ಸದಸ್ಯ ಇಕ್ಬಾಲ್ ಕರೀಮ್ ವಿಜೇತರಿಗೆ ಬಹುಮಾನ ವಿತರಿಸಿದರು.
ಫ್ರೆಂಡ್ಸ್ ವಾಲ್ಪಾಡಿ ತಂಡದ ಅಧ್ಯಕ್ಷ ಅಶ್ರಫ್ ವಾಲ್ಪಾಡಿ ಸ್ವಾಗತಿಸಿದರು. ಬೆದ್ರ ಕ್ರಿಕೆಟ್ ಯೂನಿಯನ್ ಉಪಾಧ್ಯಕ್ಷ ಸುಕುಮಾರ್, ಕಾರ್ಯದರ್ಶಿ ದಿನೇಶ್, ಕೋಶಾಧೀಕಾರಿ ಅಶ್ರಫ್, ಎಸ್.ಎ.ಇಬ್ರಾಹಿಮ್, ಬಿ.ಕೆ ಉಸ್ಮಾನ್, ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
28/10/2020 07:37 pm