ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಾಜ್ಯದಲ್ಲೇ ಮೊದಲು... ಗೋಶಾಲೆಯಲ್ಲಿ ಬಯೋ ವಿದ್ಯುತ್ ಘಟಕ!

ವರದಿ: ರಹೀಂ ಉಜಿರೆ ಉಡುಪಿ

ನೀಲಾವರ : ನೂರಾರು ಗೋವುಗಳು ಸ್ಚಚ್ಚಂದವಾಗಿ ವಿಹರಿಸುವ ನೀಲಾವರ ಗೊಶಾಲೆ ಸದ್ಯ ಹೊಸತೊಂದು " ವಿದ್ಯುತ್ ಕ್ರಾಂತಿ"ಗೆ ಮುಂದಾಗಿದೆ.ಇಲ್ಲಿ ಬಯೋ ವಿದ್ಯುತ್ ಘಟಕದ ಮೂಲಕ ಊರು ಬೆಳಗುವ ಸಿದ್ದತೆ ನಡೆದಿದೆ.ಏನಿದು ಬಯೋ ವಿದ್ಯುತ್?

ಕೇಂದ್ರ ಸರ್ಕಾರದ ನವೀಕಿಸಬಹುದಾದ ಇಂಧನ‌ ಮಂತ್ರಾಲಯದ ವತಿಯಿಂದ ಉಡುಪಿ ಜಿಲ್ಲೆಯ ನೀಲಾವರ ಗೋಶಾಲೆಯಲ್ಲಿ ರಾಜ್ಯದ ಗೋಮಯ ಆಧಾರಿತ ಮೊದಲ ಬಯೋ ವಿದ್ಯುತ್ ಘಟಕ ಸ್ಥಾಪನೆಗೆ ಸಿದ್ಧತೆಗಳು ಆರಂಭಗೊಂಡಿವೆ. ಕೇಂದ್ರ ಮಂತ್ರಿ ಭಗವಂತ್ ಖೂಬಾ ಅವರು ಇತ್ತೀಚೆಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿದ್ದ ಸಂದರ್ಭ, ಗೋಮಯವನ್ನು ಬಳಸಿಕೊಂಡು ವಿದ್ಯುತ್ ತಯಾರಿಸುವ ಬಗ್ಗೆ ಸಮಾಲೋಚನೆ ನಡೆಸಿದ್ದರು. ಪೇಜಾವರ ಶ್ರೀಗಳು ಈ ಬಗ್ಗೆ ಒಲವು ತೋರಿದ್ದರಿಂದ, ಬಯೋ ವಿದ್ಯುತ್ ಸ್ಥಾವರಗಳ ಅನುಷ್ಠಾನದಲ್ಲಿ ವಿಶೇಷ ಪರಿಣತಿ ಪಡೆದಿರುವ ಪಂಜಾಬ್ ರಿನೀವೇಬಲ್ ಎನರ್ಜಿ ಸಿಸ್ಟಮ್ ಪ್ರೈ ಲಿ ತಜ್ಞರು, ಗೋಶಾಲೆಗೆ ಆಗಮಿಸಿ ಈ ಬಗ್ಗೆ ಸಮೀಕ್ಷೆ ನಡೆಸಿದ್ದಾರೆ..

ಈ ಯೋಜನೆಗೆ ಸುಮಾರು 10 ಕೋಟಿ ವೆಚ್ಚವಾಗಬಹುದು. 5000 ಹಸುಗಳ ದಿನವಹಿ ಗೋಮಯವನ್ನು ಅಂದಾಜಿಸಿ ಯೋಜನೆ ಸಿದ್ಧಪಡಿಸಲಾಗಿದ್ದು, ಇವುಗಳಿಂದ ಕನಿಷ್ಠ ಅಂದಾಜು ದಿನವೊಂದಕ್ಕೆ 1200 ಯೂನಿಟ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿದೆ. ವಿದ್ಯುತ್ ನಿಗಮದೊಂದಿಗೆ ಒಡಂಬಡಿಕೆ ಮಾಡಿಕೊಂಡು ಮಾರಾಟ ಮಾಡಲೂ ಅವಕಾಶವಿದೆ.ಇದಲ್ಲದೆ ಯೋಜನೆಯಿಂದ ಗೋ ಸಂರಕ್ಷಣೆ ಕಾರ್ಯಕ್ಕೂ ಅನುಕೂಲವಾಗಲಿದೆ.

ಒಟ್ಟಾರೆ ಗೋಶಾಲೆಯ ವಿದ್ಯಾತ್ ಕ್ರಾಂತಿಯಿಂದ ಹೊಸ ಸಾಧ್ಯತೆಯೊಂದು ತೆರೆದಂತಾಗಿದೆ. ಜೊತೆಗೆ ಶ್ರೀಗಳ ದೇಶಿ ಗೋ ರಕ್ಷಣೆ ಕೆಲಸಕ್ಕೆ ಮತ್ತಷ್ಟು ಬಲ ಸಿಕ್ಕಂತಾಗಿದೆ..

Edited By : Nagesh Gaonkar
Kshetra Samachara

Kshetra Samachara

27/10/2021 07:34 pm

Cinque Terre

10.06 K

Cinque Terre

0