ಮಂಗಳೂರು: ದ.ಕ.ಜಿಲ್ಲೆಯಲ್ಲಿ ದೇವಸ್ಥಾನದ ಜಾತ್ರೋತ್ಸವಗಳ ವ್ಯಾಪಾರ ವಹಿವಾಟುಗಳಲ್ಲಿ ತಲೆದೋರಿದ್ದ ಧರ್ಮ ದ್ವೇಷ, ಹಲಾಲ್ - ಜಟ್ಕಾ ಕಟ್ ಗಳಲ್ಲಿ ತಲೆದೋರಿದ್ದ ಧರ್ಮ ದಂಗಲ್ ಈಗ ಸದ್ದಿಲ್ಲದೆ ಬಾಡಿಗೆ ಮನೆ ವಿಚಾರಕ್ಕೂ ಹಬ್ಬಿದೆ.
ಈ ಹಿಂದೆಯೇ ದ.ಕ.ಜಿಲ್ಲೆಯಲ್ಲಿ ಬಾಡಿಗೆ ಮನೆಯ ವಿಚಾರದಲ್ಲಿ ಹಿಂದೂಗಳಿಗೆ ಮುಸ್ಲಿಮರು, ಮುಸ್ಲಿಮರಿಗೆ ಹಿಂದೂಗಳು ಮನೆ ಕೊಡದಿರುವುದು ಅಘೋಷಿತವಾಗಿ ಚಾಲ್ತಿಯಲ್ಲಿದ್ದ ಈ ಧರ್ಮ ದಂಗಲ್ ಈಗ ಬಹಿರಂಗವಾಗಿಯೇ ಬಳಕೆಯಲ್ಲಿದೆ. ಆದರೆ ಇತ್ತೀಚೆಗೆ 'ಹಿಂದೂಗಳಿಗೆ ಮಾತ್ರ' ಅಥವಾ 'ಮುಸ್ಲಿಮರಿಗೆ ಮಾತ್ರ' ಎಂದು ಬಹಿರಂಗವಾಗಿಯೇ ಹೇಳಿಕೊಳ್ಳಲಾಗುತ್ತಿದೆ.
ಒಂದು ಧರ್ಮದವರಿಗೆ ಮಾತ್ರ ಮನೆ ಎಂದು ಬಹಿರಂಗವಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಜಾಹಿರಾತುಗಳು ಹಾಕಲಾಗುತ್ತಿದೆ. ರಿಯಲ್ ಎಸ್ಟೇಟ್ ಏಜೆಂಟರಿಂದಲೂ ಧರ್ಮಾಧಾರಿತ ಜಾಹಿರಾತುಗಳು ಕಂಡು ಬರುತ್ತಿದೆ. ಕೆಲವೊಮ್ಮೆ ಮನೆ ಮಾಲಕರು ಭಿನ್ನ ಮತೀಯರಿಗೆ ಬಾಡಿಗೆ ಮನೆಗಳನ್ನು ನೀಡಲು ಸಿದ್ಧರಿದ್ದರೂ ಬ್ರೋಕರ್‌ಗಳು ತಮ್ಮ ಜಾಹಿರಾತಿನಲ್ಲಿ ಇದುವೇ ಧರ್ಮದವರಿಗೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್ ಮಾರ್ಕೆಟ್ ಪ್ಲೇಸ್ ಸೇರಿದಂತೆ ಅನೇಕ ರಿಯಲ್ ಎಸ್ಟೇಟ್ ವೆಬ್ ಸೈಟ್ ಗಳಲ್ಲಿ ಈ ರೀತಿಯ ಜಾಹಿರಾತುಗಳು ಕಂಡು ಬರುತ್ತಿದೆ.
PublicNext
25/08/2022 06:03 pm