ಬೈಂದೂರು: ನಾವುಂದ ಶ್ರೀ ಗೋಪಾಲ್ ಕೃಷ್ಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಅಷ್ಟಮಿ ಪ್ರಯುಕ್ತ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ತೊಟ್ಟಿಲು ತೂಗುವ ಉತ್ಸವ, ಮೊಸರು ಕುಣಿಗೆ ಹಬ್ಬ ಹಾಗೂ ನಾರಾಯಣ ಗುರು ಮಹಿಳಾ ಭಜನಾ ಮಂಡಳಿ ನಾವುಂದ ಮಹಿಳೆಯರಿಂದ ಕುಣಿತ ಮತ್ತು ಭಜನೆ ದೇವಸ್ಥಾನದಲ್ಲಿ ನಡೆಯಿತು.
ವರ್ಷವಿಡೀ ಉತ್ಸವಗಳಿರುತ್ತೆ, ಅದರಲ್ಲೂ ಕೃಷ್ಣಾಷ್ಟಮಿಯ ಹಬ್ಬದ ದಿನದಂದು ಪುಟಾಣಿ ಮಕ್ಕಳ ವೇಷದ ಸೊಬಗೆ ಮತ್ತೊಂದು, ಆ.19 ರಂದು ಅಷ್ಢಮಿ ಹಬ್ಬವಾದರೆ ಮರುದಿನ ಅಂದರೆ ಆ.20 ವಿಟ್ಲಪಿಂಡಿ ಅಥವಾ ಶ್ರೀಕೃಷ್ಣಲೀಲೋತ್ಸವ ಎಂದು ಕರೆಯಲ್ಪಡುವ ಸಂಭ್ರಮಿಸುವ ಸಡಗರದ ಹಬ್ಬ ಇದಾಗಿರುತ್ತದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಕಾರಂತ್ ಮಾತನಾಡಿ ಈ ಹಬ್ಬದಿಂದ ಈ ಭಾಗದ ಸರ್ವ ಜನರಿಗೂ ದೇವರು ಉದ್ಯೋತ್ತರ ಅಭಿವೃದ್ಧಿ ಶಿಕ್ಷಣ ಆರೋಗ್ಯ ಶ್ರೀಕೃಷ್ಣನು ಸರ್ವರಿಗೂ ಕರುಣಿಸಲಿ ಎಂದು ಹಾರೈಸಿದರು.
ದೇವಸ್ಥಾನದ ಕಮಿಟಿ ಸದಸ್ಯರಾದ ಸತೀಶ್ ಭಟ್ ಮಾತನಾಡಿ. ವರ್ಷ ಕಳೆದಂತೆ ದೇವಸ್ಥಾನದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ದೇವಸ್ಥಾನಕ್ಕೆ ಸರಿಯಾದ ಜಾಗಾವಕಾಶ ಇಲ್ಲದಿರುವುದು ವಿಷಾದ ವ್ಯಕ್ತಪಡಿಸಿದರು.ಜೊತೆಗೆ ದೇವಸ್ಥಾನದ ಅಧ್ಯಕ್ಷರಾದ ಬಾಬು ಶೆಟ್ಟಿ ಅವರು ಮುಂದಿನ ದಿನದಲ್ಲಿ ಇನ್ನು ಹೆಚ್ಚು ಭಕ್ತರು ಸೇರುವಂತಾಗಲಿ ಎಂದು ಶ್ರೀ ಕೃಷ್ಣ ನಲ್ಲಿ ಪ್ರಾರ್ಥಿಸಿದರು.ಈ ಸಂದರ್ಭ.ಆಡಳಿತ ಮಂಡಳಿಯ ಸದಸ್ಯರು ಹಾಗೂ ಊರಿನವರು ಉಪಸ್ಥಿತರಿದ್ದರು.
Kshetra Samachara
19/08/2022 04:49 pm