ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತುಳುನಾಡ ವಿಶೇಷ " ಆಟಿಡೊಂಜಿ ದಿನ"; ಹಿಂದಿನ ಸಂಕಷ್ಟದ ದಿನಮಾನ ಸ್ಮರಣೆ

ವರದಿ: ರಹೀಂ ಉಜಿರೆ

ಉಡುಪಿ: ತುಳುನಾಡಲ್ಲಿ ಆಷಾಢ ಮಾಸಕ್ಕೆ ತನ್ನದೇ ಆದ ಮಹತ್ವ ಇದೆ. ಈಗ ತುಳುವರು ಆಟಿ ಎಂದು ಕರೆಯಲ್ಪಡುವ ಆಷಾಢ ತಿಂಗಳು ನಡೆಯುತ್ತಿದೆ. 30 - 40 ವರ್ಷಗಳ ಹಿಂದೆ "ಆಟಿ " ತಿಂಗಳು ತುಳುವರಲ್ಲಿ ಬಹಳ ಸಂಕಷ್ಟದ ಸಮಯವಾಗಿತ್ತು. ಎಡೆಬಿಡದೆ ಸುರಿಯುವ ಮಳೆ, ಬೇಸಾಯ ಕೆಲಸ ಆಯಾಸ, ರೋಗರುಜಿನಗಳ ಪ್ರಸಾರ, ಆಹಾರದ ಕೊರತೆ ಬಹಳವಿತ್ತು.

ಈ ಸಂದರ್ಭ ಹಿರಿಯರು ಪ್ರಕೃತಿದತ್ತವಾಗಿ ಸಿಗುತ್ತಿದ್ದ ಗಡ್ಡೆಗೆಣಸು, ಹಲಸು, ಸೊಪ್ಪು, ತರಕಾರಿಗಳನ್ನು ತಿಂದು ತಮ್ಮ ಆರೋಗ್ಯ ಕಾಪಾಡಿಕೊಂಡಿದ್ದರು. ಆದರೆ, ಇಂದಿನ ಫಾಸ್ಟ್‌ಫುಡ್‌ ಯುಗದಲ್ಲಿ ನಮ್ಮ ಮಕ್ಕಳಿಗೆ ಇದೆಲ್ಲ ಅಪಥ್ಯವಾದರೂ, ಅಂದಿನ ಸಂಕಷ್ಟದ ದಿನಗಳನ್ನು ನೆನೆಯುವ ಉದ್ದೇಶದಿಂದ "ಆಟಿಡೊಂಜಿ ದಿನ" ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.

ಉಡುಪಿಯ ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಮಹಿಳಾ ಒಕ್ಕೂಟಗಳು ಏರ್ಪಡಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಆಷಾಢದ ಖಾದ್ಯಗಳು ಈ ತಲೆಮಾರಿನ ಯುವಕ-ಯುವತಿಯರ ಮನಸೂರೆಗೊಂಡವು.

* 20ಕ್ಕೂ ಹೆಚ್ಚು ಖಾದ್ಯ ವೈವಿಧ್ಯ!;ನೀವು ನಂಬಲಿಕ್ಕಿಲ್ಲ, ಈ ಆಟಿಡೊಂಜಿ ದಿನ ಕಾರ್ಯಕ್ರಮದ ಪ್ರಮುಖ ಅಕರ್ಷಣೆಯೇ ತಿಂಡಿ ತಿನಿಸು. ಬಹುತೇಕ ಈಗಿನ ಮನೆಗಳಲ್ಲಿ ಕಾಣಸಿಗದ ಭಕ್ಷ್ಯ ಭೋಜನ ನೆರೆದ ಜನರ ಹೊಟ್ಟೆ ತಣಿಸಿತು.

ಸಭಾ ಕಾರ್ಯಕ್ರಮದ ಬಳಿಕ ಮಹಿಳಾ ಮಂಡಳಗಳು ತಯಾರಿಸಿದ 20ಕ್ಕೂ ಅಧಿಕ ಆಟಿ ಖಾದ್ಯಗಳನ್ನು ಸಭಿಕರಿಗೆ ಉಣ ಬಡಿಸಲಾಯಿತು. ಉಪ್ಪಡ್‌, ತಿಮರೆ ಚಟ್ನಿ, ಕುಕ್ಕು ಚಟ್ನಿ, ಉಪ್ಪಡ್‌ ಪಚ್ಚೀರ್‌ ಕೈಪು, ಪುಂಡಿ ಗಸಿ, ಕೆಂಡದಡ್ಡೆ, ಸೇಮೆದಡ್ಡೆ, ನುಗ್ಗೆ ವಡೆ, ತೇವುದ ಚಟ್ನಿ, ಪಾಯಸ, ಹಲಸಿನ ಮುಳ್ಕ, ತೇವು ತಜಂಕ್‌ ಪದ್ಪೆ ಪಲ್ಯ, ಪತ್ರೊಡೆ, ಕುಡುತಸಾರ್, ಪೆಲಕಾಯಿದ ಗಟ್ಟಿ, ಮೂಡೆ, ಗುಳ್ಳ ಸೌತೆ ಪದೆಂಗಿ ಕೊದ್ದೆಲ್‌, ಉರ್ಪೆಲ್‌ ನುಪ್ಪು, ಮಂಜಲ್ದ ಇರೆತ ಗಟ್ಟಿ, ಕಣಿಲೆ ಪದೆಂಗಿ, ಪೀರೆ ಗಸಿ, ಬೆಂಜನ ಇತ್ಯಾದಿ, ಖಾದ್ಯ ಪ್ರಿಯರ ಹೊಟ್ಟೆ ತಣಿಸಿದವು. ಜೊತೆಗೆ ಆಟಗಳು ಮತ್ತು ನೃತ್ಯ ಮತ್ತಷ್ಟು ರಂಗು ತುಂಬಿದವು.

Edited By :
PublicNext

PublicNext

25/07/2022 06:59 pm

Cinque Terre

35.88 K

Cinque Terre

3

ಸಂಬಂಧಿತ ಸುದ್ದಿ