ಕೊಲ್ಲೂರು: ಕಳೆದ ಒಂದು ವಾರದಿಂದ ಜಿಲ್ಲೆಯ ಪುಣ್ಯಕ್ಷೇತ್ರಗಳಿಗೆ ಭಕ್ತರ ದಂಡೇ ಹರಿದು ಬರುತ್ತಿದೆ. ಮುಖ್ಯವಾಗಿ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮತ್ತು ಮಲ್ಪೆ ಬೀಚ್ ನಲ್ಲಿ ಸಾವಿರಾರು ಪ್ರವಾಸಿಗರು ಮತ್ತು ಭಕ್ತಾದಿಗಳು ಕಂಡು ಬಂದರು.
ಕೊಲ್ಲೂರಿನಲ್ಲಿ ಭಕ್ತರ ಸರತಿ ಸಾಲು ನಗರದ ತನಕ ಹಬ್ಬಿತ್ತು.ಮುಖ್ಯವಾಗಿ ಶಾಲಾರಂಭಕ್ಕೂ ಮುನ್ನ ಭಕ್ತರು ಕುಟುಂಬ ಸಮೇತ ಆಗಮಿಸುತ್ತಿದ್ದಾರೆ. ಕೊಲ್ಲೂರಿಗೆ ತಮಿಳುನಾಡು ಮತ್ತು ಕೇರಳ ದಿಂದ ಸಾಕಷ್ಟು ಜನ ಬರುತ್ತಿದ್ದಾರೆ.ಪ್ರತಿನಿತ್ಯ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಕ್ಷೇತ್ರದತ್ತ ಬರುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಜಿಲ್ಲೆಯ ಪುಣ್ಯಕ್ಷೇತ್ರಗಳು ಭಕ್ತರಿಂದ ತುಂಬಿ ತುಳುಕುತ್ತಿವೆ.
Kshetra Samachara
16/05/2022 11:46 am