ಕಾಪು: ಕಾಪುವಿನಲ್ಲಿ ನಡೆಯಲಿರುವ ದ್ವೈವಾರ್ಷಿಕ ಕಾಪುದ ಪಿಲಿಕೋಲಕ್ಕೆ ಪೂರ್ವಭಾವಿಯಾಗಿ ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಮಂಗಳವಾರ ಪ್ರಾರ್ಥನೆಯೊಂದಿಗೆ ಅಭಯ ಪ್ರಸಾದ ಪಡೆಯಲಾಯಿತು. ಪಿಲಿಕೋಲದ ಸಿದ್ಧತೆಯಲ್ಲಿರುವ ಕಾಪುವಿನ ಶ್ರೀ ಬ್ರಹ್ಮಮುಗ್ಗೇರ್ಕಳ ಹುಲಿಚಂಡಿ ದೈವಸ್ಥಾನದ ಆಡಳಿತ ಮಂಡಳಿ, ಕಾಣಿಕೆ ಮನೆತನದವರು, ಗುರಿಕಾರರು ಮತ್ತು ಹತ್ತು ಸಮಸರು ಜೊತೆಗೂಡಿ ಮಂಗಳವಾರ ಕಾಪು ಹಳೇ ಮಾರಿಗುಡಿ, ಹೊಸ ಮಾರಿಗುಡಿ ಮತ್ತು ಮೂರನೇ ಮಾರಿಗುಡಿಗೆ ತೆರಳಿ ಮಾರಿಯಮ್ಮ ದೇವಿಯ ಬಳಿ ಪ್ರಾರ್ಥನೆ ಸಲ್ಲಿಸಿದರು.
ಮೂರೂ ಮಾರಿಗುಡಿಗಳಲ್ಲೂ ಪ್ರಾರ್ಥನೆ ಸಲ್ಲಿಸಿದ ಬಳಿಕ, ಪಿಲಿ ಭೂತದ ನರ್ತಕನಿಗೆ ಮಾರಿಯಮ್ಮ ದೇವಿಯ ಅಭಯ ಪ್ರಸಾದವನ್ನು ನೀಡಿ, ಸಂಪ್ರದಾಯ ಬದ್ಧವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗುವಂತೆ ಸೂಚನೆ ನೀಡುತ್ತಾರೆ.
ಕಾಪುವಿನಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿಕೋಲವು ಧಾರ್ಮಿಕ ಮತ್ತು ಜನಪದ ಆಚರಣೆಗಳ ಜೀವಂತ ಉದಾಹರಣೆಯಾಗಿದ್ದು, ಪಿಲಿ ಕೋಲದ ಮೂಲಕವಾಗಿ ತುಳುನಾಡಿನ ಸಂಸ್ಕೃತಿ, ಸಂಪ್ರದಾಯ, ನಂಬಿಕೆ, ನಡವಳಿಕೆ ಸಹಿತವಾಗಿ ಸತ್ಯದ ಅನಾವರಣಗೊಳ್ಳುತ್ತದೆ. ಇನ್ನು ಈ ಬಗ್ಗೆ ಮಾತನಾಡಿದ ದೊರೆಕಳಗುತ್ತು ಬಾಲಕೃಷ್ಣ ಶೆಟ್ಟಿ, ಪೂರ್ವದಲ್ಲಿ ಮೂರೂ ಮಾರಿಗುಡಿಗೂ ತೆರಳಿ ಪಿಲಿ ಕೋಲ ಸುಸೂತ್ರವಾಗಿ ನಡೆಯುವಂತಾಗಲು ಉತ್ತಮ ಪ್ರಸಾದ ನೀಡುವಂತೆ ಪ್ರಾರ್ಥಿಸುವುದಕ್ಕಾಗಿ ಮಾರಿಯಮ್ಮನ ಸನ್ನಿಧಿಗೆ ಆಗಮಿಸಿದ್ದೇವೆ. ಇಲ್ಲಿ ಒಳ್ಳೆಯ ಪ್ರಸಾದ ಸಿಕ್ಕಿದೆ. ಐದು ದಿನಗಳ ಜಾತ್ರೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಡುವುದಾಗಿ ಮಾರಿಯಮ್ಮ ದೇವಿಯ ಅಭಯ ದೊರಕಿದೆ ಎಂದು ತಿಳಿಸಿದ್ದಾರೆ.
Kshetra Samachara
11/05/2022 01:15 pm