ಉಡುಪಿ: ಈ ಬಾರಿ ಕರಾವಳಿಯಲ್ಲಿ ನಾಳೆ ಈದುಲ್ ಫಿತ್ರ್ (ರಮಝಾನ್) ಹಬ್ಬ ಎಂದು ಘೋಷಣೆ ಮಾಡಲಾಗಿತ್ತು. ಆದರೆ ತಡರಾತ್ರಿ ಕುಮಟಾದಲ್ಲಿ ಚಂದ್ರದರ್ಶನವಾದ ಬಗ್ಗೆ ಮಾಹಿತಿ ಬಂತು. ಈ ಹಿನ್ನೆಲೆಯಲ್ಕಿ ಉಡುಪಿ ಜಿಲ್ಲೆಯ ಕೆಲವು ಜಮಾಅತ್ ವ್ಯಾಪ್ತಿಯಲ್ಲಿ ಇಂದೇ ಈದುಲ್ ಫಿತ್ರ್ ಆಚರಣೆ ಮಾಡಲಾಯಿತು.
ಉಡುಪಿ ಹೃದಯ ಭಾಗದ ಜಾಮಿಯಾ ಮಸೀದಿ ಸಹಿತ ಇಂದ್ರಾಳಿ, ಮಲ್ಪೆ , ಬ್ರಹ್ಮಗಿರಿಯ ಹಾಶಿಮಿ ಮಸೀದಿ ಸಹಿತ ಹಲವು ಮಸೀದಿಗಳಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮುಸಲ್ಮಾನ ಬಾಂಧವರು ಮಸೀದಿಗಳಿಗೆ ತೆರಳಿ ಸಾಮೂಹಿಕ ನಮಾಝ್‌ನಲ್ಲಿ ಭಾಗವಹಿಸಿದರು. ಹೊಸ ಬಟ್ಟೆ ತೊಟ್ಟು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ದಕ್ಷಿಣ ಕನ್ನಡ ಸಹಿತ ಬೆಂಗಳೂರಿನಲ್ಲಿ ನಾಳೆ ಹಬ್ಬ ನಡೆಯಲಿದೆ.
Kshetra Samachara
02/05/2022 11:51 am