ಉಡುಪಿ:ಗಾಂಧಿ ತತ್ವಕ್ಕಿಂತ ಗೋಡ್ಸೆ ತತ್ವ ಮುಖ್ಯ ಎಂದು ಹಿಂದೂ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಹೇಳಿಕೆ ನೀಡಿದ್ದಾರೆ.
ಉಡುಪಿಯ ಓಷಿಯನ್ ಪರ್ಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಗಾಂಧೀಜಿ ಅನುಯಾಯಿಗಳ ಹಾವಳಿಯನ್ನು ನಾವು ರಾಜ್ಯದಲ್ಲಿ ನೋಡುತ್ತಿದ್ದೇವೆ. ನಮಗೆ ಗಾಂಧಿಗಿಂತ ಗೋಡ್ಸೆ ಮುಖ್ಯ ಎಂದು ಹೇಳಿದರು.2014 ರಲ್ಲಿ ಪ್ರಧಾನಿ ಮೋದಿ ಭ್ರಷ್ಟಾಚಾರ ಮುಕ್ತ ಭಾರತ ಮಾಡುತ್ತೇವೆ ಎಂದು ಹೇಳಿದರು.
ಅವರ ಮಾತು ರಾಜ್ಯ ಬಿಜೆಪಿಗೆ ಅನ್ವಯವಾಗುವುದಿಲ್ಲವೆ? ಇಲ್ಲಿ ಯಾವ ಕೆಲಸ ಆಗಬೇಕಿದ್ದರೂ 40% ಕಮಿಷನ್ ನೀಡಬೇಕು. ಸರಕಾರದ ಸಚಿವ ಸಂಪುಟದಲ್ಲಿ ಮೂಲ ಬಿಜೆಪಿಗಿಂತ ಆಮದು ಮಾಡಿಕೊಂಡ ಕಾಂಗ್ರೆಸ್ ನಾಯಕರೇ ಇದ್ದಾರೆ.ಇನ್ನು ಭ್ರಷ್ಟಾಚಾರ ಮುಕ್ತ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಅರ್ಥ ಎಲ್ಲಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
PublicNext
29/04/2022 07:06 pm