ಸುಳ್ಯ: ಸುಳ್ಯದ ಶ್ರೀ ಗುರು ರಾಘವೇಂದ್ರ ಮಠದ 4ನೇ ವರ್ಷದ ಪ್ರತಿಷ್ಠಾ ವಾರ್ಷಿಕ ಮಹೋತ್ಸವದ ಅಂಗವಾಗಿ ಏ.21ರಂದು ಸಂಜೆ ಪಲ್ಲಕ್ಕಿಯಲ್ಲಿ ರಾಯರ ಪಟ್ಟಣ ಸವಾರಿ ಸುಳ್ಯನಗರದಲ್ಲಿ ನಡೆಯಿತು.
ಶ್ರೀ ರಾಘವೇಂದ್ರ ಮಠದಿಂದ ಹೊರಟ ಪಟ್ಟಣ ಸವಾರಿ ನಗರದಲ್ಲಿ ಭಕ್ತಿ ಸಂಭ್ರಮದಿಂದ ನಡೆಯಿತು. ಚೆಂಡೆ ವಾದನ, ಸಿಂಗಾರಿ ಮೇಳ,
ವಾದ್ಯ, ಆಕರ್ಷಕ ಭಜನೆ, ಕುಣಿತ ಭಜನೆಯ ಮಧ್ಯೆ ಭಕ್ತ ಸಮೂಹದೊಂದಿಗೆ ರಾಯರು ಪಲ್ಲಕ್ಕಿಯಲ್ಲಿ ಸುಳ್ಯ ನಗರದಲ್ಲಿ ಸಾಗಿ ಬಂದರು.
ಶ್ರೀ ರಾಘವೇಂದ್ರ ಮಠದಿಂದ ಹೊರಟ ಪಟ್ಟಣ ಸವಾರಿ ಯುವಜನ ಸಂಯುಕ್ತ ಮಂಡಳಿ ಬಳಿ, ಶ್ರೀಹರಿ ಕಾಂಪ್ಲೆಕ್ಸ್, ಖಾಸಗಿ ಬಸ್ ನಿಲ್ದಾಣ, ಚೆನ್ನಕೇಶವ ದೇವಸ್ಥಾನದ ಬಳಿಯಲ್ಲಿ ಭಕ್ತರಿಗೆ ದರ್ಶನ ನೀಡಿತು. ಬಾಳಿಲ ತಂಡದ ಸಿಂಗಾರಿ ಮೇಳ ಚೆಂಡೆ ವಾದನ, ಎಣ್ಮೂರಿನ ತಂಡದಿಂದ ಕುಣಿತ ಭಜನೆ, ದೀಪಾಂಜಲಿ ಭಜನಾ ತಂಡ, ಆಲೆಟ್ಟಿ ಸದಾಶಿವ ಭಜನಾ ತಂಡದಿಂದ ಭಜನೆ ನಡೆಯಿತು. ಬಳಿಕ ಸ್ಯಾಕ್ಸೋಫೋನ್ ವಾದನಕ್ಕೆ ಪಲ್ಲಕ್ಕಿ ಹೊತ್ತುಕೊಂಡು ಕುಣಿತ ನಡೆಯಿತು.
ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಂ.ಎನ್.ಸೋಮಯಾಗಿ, ಪ್ರಮುಖರಾದ ಗುರೀಶ್ ಕೇಕುಣ್ಣಾಯ, ಮುರಳೀಕೃಷ್ಣ, ಪ್ರಕಾಶ್ ಮೂಡಿತ್ತಾಯ, ನವೀನ್ ಸೋಮಯಾಗಿ, ಮಹೇಶ್, ಗಂಗಾಧರ ಮಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
22/04/2022 08:38 pm