ಯಡ್ತಾಡಿ: ಇಂದು ನಡೆಯಲಿರುವ ಯಡ್ತಾಡಿ ಶ್ರೀ ನಂದಿಕೇಶ್ವರ ದೇವಸ್ಥಾನದ ಜಾತ್ರೆ ಮತ್ತು ನಾಳೆ ನಡೆಯಲಿರುವ ಕೊಲ್ಲೂರು ವಾರ್ಷಿಕ ಉತ್ಸವದಲ್ಲಿ ಮುಸಲ್ಮಾನ ವ್ಯಾಪಾರಿಗಳಿಗೆ ನಿಷೇಧ ಹೇರಲಾಗಿದೆ. ಈ ಸಂಬಂಧ ದೇವಸ್ಥಾನದ ವಠಾರದಲ್ಲಿ ಬ್ಯಾನರ್ ಅನ್ನು ಕೂಡ ಹಾಕಲಾಗಿದೆ.
ಈ ನೆಲದ ಕಾನೂನು ಗೌರವಿಸದವರು ಮತ್ತು ಗೋಹತ್ಯೆ ಮಾಡುವವರಿಗೆ ನಮ್ಮ ದೇವಸ್ಥಾನದಲ್ಲಿ ಅವಕಾಶ ಇಲ್ಲ ಎಂಬ ಬ್ಯಾನರ್‌ಗಳನ್ನು ಊರಿನಲ್ಲಿ ಅಳವಡಿಸಲಾಗಿದೆ. ಇನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಾಳೆ ಉತ್ಸವ ನಡೆಯಲಿದ್ದು, ಅಲ್ಲೂ ವ್ಯಾಪಾರಕ್ಕೆ ಹಿಂದೂಯೇತರರಿಗೆ ಅವಕಾಶ ನಿರಾಕರಿಸಲಾಗಿದೆ.
ಈ ಕುರಿತು ಮಾತನಾಡಿರುವ ಕೊಲ್ಲೂರಿನ ವಿಶ್ವ ಹಿಂದೂ ಪರಿಷದ್ ಮುಖಂಡ ಜಗದೀಶ್, ನಾಳೆ ನಡೆಯಲಿರುವ ಕೊಲ್ಲೂರು ಉತ್ಸವದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ಮನವಿ ಸಲ್ಲಿಸಿದ್ದೇವೆ. ಈ ದೇಶದ ಕಾನೂನನ್ನು ಪಾಲಿಸದವರು ರಾಷ್ಟ್ರ ದ್ರೋಹಿಗಳು. ಅವರು ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
Kshetra Samachara
24/03/2022 07:17 pm