ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಬಿಗಿ ಭದ್ರತೆಯೊಂದಿಗೆ ಎರಡು ದಿನಗಳ ಕಾಪು ಸುಗ್ಗಿ ಮಾರಿಜಾತ್ರೆ ಆರಂಭ

ಕಾಪು: ಉಡುಪಿ ಜಿಲ್ಲೆಯ ಕಾಪುವಿನ ಪ್ರಸಿದ್ಧ ಸುಗ್ಗಿ ಮಾರಿ ಜಾತ್ರಾ ಮಹೋತ್ಸವ ಇವತ್ತಿನಿಂದ ನಡೆಯುತ್ತಿದೆ. ಇಂದು ಮತ್ತು ನಾಳೆ ಮಾರಿಜಾತ್ರೆ ನಡೆಯುವ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮತ್ತು ಕಾಪು ಪೇಟೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುಖ್ಯವಾಗಿ ಈ ಬಾರಿ ಮಾರಿ ಪೂಜೆ ಸಂದರ್ಭ ಮುಸಲ್ಮಾನರಿಗೆ ಜಾತ್ರೆಯಲ್ಲಿ ಯಾವುದೇ ವ್ಯಾಪಾರ ಮಾಡಲು ಅವಕಾಶ ನಿರಾಕರಿಸಲಾಗಿದೆ. ವರ್ಷಂಪ್ರತಿ ಇಲ್ಲಿ ಮಾರಿಜಾತ್ರೆ ಸಂದರ್ಭ ದೇವಿಗೆ ಅರ್ಪಿಸುವ ಕೋಳಿಗಳನ್ನು ಮುಸಲ್ಮಾನರೇ ಇಲ್ಲಿ ಮಳಿಗೆ ಇಟ್ಡು ವ್ಯಾಪಾರ ಮಾಡುತ್ತಿದ್ದರು.ಆದರೆ ಇದೇ ಮೊದಲ ಬಾರಿಗೆ ಇಲ್ಲಿ ಹಿಂದೂ ಧರ್ಮೀಯರಿಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ.ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ದೇವಸ್ಥಾನದ ಸುತ್ತಮುತ್ತ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ.

Edited By :
Kshetra Samachara

Kshetra Samachara

22/03/2022 01:09 pm

Cinque Terre

12.9 K

Cinque Terre

6

ಸಂಬಂಧಿತ ಸುದ್ದಿ