ಕಾಪು: ಪೈಯಾರು ಶ್ರೀ ಕಾಂತಾನಧಿಕಾರಿ ಧೂಮಾವತಿ ದೈವಸ್ಥಾನದ ವಾರ್ಷಿಕ ನೇಮೋತ್ಸವ ವಿಜೃಂಭಣೆಯಿಂದ ಸಂಪನ್ನ ಗೊಂಡಿತು.
ನೇಮೋತ್ಸವದ ಪ್ರಯುಕ್ತ ಭಂಡಾರ ಇಳಿದು, ಬಳಿಕ ಅನ್ನಸಂತರ್ಪಣೆ ನೆರವೇರಿತು. ರಾತ್ರಿ ಧೂಮಾವತಿ ಹಾಗೂ ಬಂಟ ದೈವಗಳ ನೆಮೋತ್ಸವ ಜರುಗಿತು. ನೇಮೋತ್ಸವ ಅಂಗವಾಗಿ ವಿಶೇಷ ಪುಷ್ಪ ಹಾಗೂ ವಿದ್ಯುತ್ ದೀಪ ಅಲಂಕಾರದಿಂದ ದೈವಸ್ಥಾನವು ಕಂಗೊಳಿಸಿತು. ಕಾಪು ಶಾಸಕ ಲಾಲಾಜಿ ಮೆಂಡನ್, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ, ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ನೂರಾರು ಭಕ್ತರು ನೇಮೋತ್ಸವದಲ್ಲಿ ಪಾಲ್ಗೊಂಡು ಗಂಧ ಪ್ರಸಾದ ಸ್ವೀಕರಿಸಿದರು.
Kshetra Samachara
08/03/2022 02:58 pm