ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: ಉಳಿಯಾರ ಅಮ್ಮನ ವಾರ್ಷಿಕ ಮಹೋತ್ಸವ ಸಮಾಪನ; ಓಕುಳಿ ಸ್ನಾನ

ಕಾಪು: ಉಳಿಯಾರು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಸಂಪನ್ನ ಗೊಂಡಿತು. ಮಹಾಶಿವರಾತ್ರಿಯಂದು ಧ್ವಜಾರೋಹಣ ನೆರವೇರುವ ಮೂಲಕ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ.

4 ದಿನಗಳ ಪರ್ಯಂತ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು.

ಶುಕ್ರವಾರ ರಾತ್ರಿ ಓಕುಳಿ ಸ್ನಾನ, ಮೂಡು ಸವಾರಿ, ಕಟ್ಟೆಪೂಜೆ, ಶ್ರೀ ವಿಷ್ಣುಮೂರ್ತಿ ಹಾಗೂ ಶ್ರೀ ಬ್ರಹ್ಮದೇವರ ಭೇಟಿ ಸೇರಿದಂತೆ ಬಲಿ ಉತ್ಸವ ನೆರವೇರಿತು.

ಯುವಕರು ಓಕುಳಿಯಲ್ಲಿ ಮಿಂದೆದ್ದು ಹಾಡಿ, ಕುಣಿದು ಉತ್ಸವದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ದೇವಾಲಯ ವಿಶೇಷ ವಿದ್ಯುತ್ ಹಾಗೂ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿತು. ಸಾವಿರಾರು ಭಕ್ತರು ಉಳಿಯಾರ ಅಮ್ಮನ ಮಹೋತ್ಸವದಲ್ಲಿ ಪಾಲ್ಗೊಂಡರು.

Edited By :
Kshetra Samachara

Kshetra Samachara

05/03/2022 01:30 pm

Cinque Terre

7.03 K

Cinque Terre

0