ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪುತ್ತೂರು: ಕಲ್ಮಶ ಕಳೆಯಲು ಬೆಂಕಿ ಸ್ನಾನ! ಇದು ಮೂಕಾಂಬಿಕಾ ಗುಳಿಗ ದೈವ ವಿಶೇಷತೆ

ಪುತ್ತೂರು: ಕರಾವಳಿಯಲ್ಲಿ ಆರಾಧಿಸಲ್ಪಡುವ ಅತಿ ವಿಶೇಷ ದೈವಗಳಲ್ಲಿ ಮೂಕಾಂಬಿಕಾ ಗುಳಿಗ ದೈವವೂ ಒಂದು. ನಮ್ಮ ಕರಾವಳಿ ಹಾಗೂ ಕೇರಳದ ಕೆಲ ಭಾಗದಲ್ಲಿ ಮಾತ್ರ ಈ ಮೂಕಾಂಬಿಕಾ ಗುಳಿಗ ದೈವಕ್ಕೆ ಕೋಲ (ಉತ್ಸವ) ನಡೆಸಲಾಗುತ್ತದೆ. ಕೊಲ್ಲೂರಿನಲ್ಲಿ ದೇವಿಯು ಅವತಾರವೆತ್ತಿ, ಮೂಕಾಸುರನೆಂಬ ರಾಕ್ಷಸನನ್ನು ಸಂಹರಿಸುವ ಸಂದರ್ಭ ವಧಾ ಸ್ಥಳವಾದ ಮಾರಣಕಟ್ಟೆಯಲ್ಲಿ ಶಿವದೂತ ಗುಳಿಗ ಅದೇ ಸ್ಥಳದಲ್ಲಿ ನೆಲೆಸಿದ್ದ.

ಈ ಮಧ್ಯೆ ಕೊಲ್ಲೂರಿನ ತಂತ್ರಿಯೋರ್ವರು ಕೇರಳಕ್ಕೆ ಶಾಂತಿಪೂಜೆ ನೆರವೇರಿಸಲು ತನ್ನ ಪತ್ನಿಯೊಂದಿಗೆ ಹೊರಟಿದ್ದರು. ಈ ವೇಳೆ ಗುಳಿಗ ದೈವವೂ ತಂತ್ರಿಯವರ ರಕ್ಷಣೆಗಾಗಿ ಕೇರಳಕ್ಕೆ ಹೊರಟಿದೆ. ಮಾರ್ಗ ಮಧ್ಯೆ ತಂತ್ರಿಯವರ ಪತ್ನಿ ಮೂಕಾಂಬಿಕೆಯನ್ನು ದುರುಳನೊಬ್ಬ ಅತ್ಯಾಚಾರ ಮಾಡಲು ಯತ್ನಿಸುತ್ತಾನೆ. ಇದರಿಂದ ನೊಂದ ಮೂಕಾಂಬಿಕೆ ನೀರಿಗೆ ಹಾರಿ ಆತ್ಮಹತ್ಯೆ ಗೈಯುತ್ತಾಳೆ!

ಆಗ ಆಕೆಯ ಆತ್ಮ ಗುಳಿಗ ದೈವದೊಂದಿಗೆ ಸೇರಿಕೊಳ್ಳುತ್ತದೆ. ಗುಳಿಗನೊಂದಿಗೆ ಸೇರಿಕೊಂಡ ಮೂಕಾಂಬಿಕೆ ಅತ್ಯಾಚಾರಕ್ಕೆ ಯತ್ನಿಸಿದ ದುಷ್ಟನ ಇಡೀ ಕುಟುಂಬವನ್ನೇ ನಾಶ ಮಾಡುತ್ತಾರೆ. ಆ ಬಳಿಕ ಮೂಕಾಂಬಿಕಾ ಗುಳಿಗನಾಗಿ ಆರಾಧಿಸಲ್ಪಡುವ ಮೂಲಕ ಕರಾವಳಿಯ ಅತ್ಯಂತ ಪ್ರಭಾವಿ ದೈವವಾಗಿ ಹೆಸರು ಪಡೆಯುತ್ತದೆ.

ಈ ಘಟನೆಯ ಚಿತ್ರಣವನ್ನೇ ಮೂಕಾಂಬಿಕಾ ಗುಳಿಗ ದೈವದ ಉತ್ಸವದಂದು ದೈವಗಳು ತೋರಿಸಿಕೊಡುತ್ತವೆ. ಅಡಿಕೆ ಮರಗಳನ್ನು ಕಡಿದು, ಮರದ ನೂರಾರು ತೊಲೆಗಳನ್ನು ಸೇರಿಸಿ, ಅವುಗಳಿಗೆ ಬೆಂಕಿ ಹಚ್ಚಲಾಗುತ್ತದೆ. ಆ ಬೆಂಕಿಯಲ್ಲಿ ದೈವದ ಪಾತ್ರಧಾರಿ ಬೀಳುವ, ಮಲಗುವ, ಉರುಳುವ, ಕುಳಿತುಕೊಳ್ಳುವ ಹೀಗೆ ಹಲವು ರೀತಿ ಬೆಂಕಿಯ ಕೆನ್ನಾಲಿಯಲ್ಲಿ ಸ್ನಾನ ಮಾಡುವುದು ಈ ದೈವ ಕೋಲದ ವಿಶೇಷತೆಯಾಗಿದೆ.

Edited By :
Kshetra Samachara

Kshetra Samachara

03/03/2022 06:47 pm

Cinque Terre

6.72 K

Cinque Terre

0

ಸಂಬಂಧಿತ ಸುದ್ದಿ