ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಪುರಾತನ ದೇವಾಲಯದ ಪುನರುತ್ಥಾನಕ್ಕೆ ಪೇಜಾವರ ಶ್ರೀ ಭೂಮಿಪೂಜೆ

ಬಿಲ್ಲಾಡಿ: ಬಿಲ್ಲಾಡಿ ಗ್ರಾಮದ ಕದರಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಾಡಿನ ನಡುವೆ ಇದ್ದು ಪೂಜೆ ಪುನಸ್ಕಾರ ಇಲ್ಲದೆ 56 ವರ್ಷಗಳಿಂದ ಪಾಳು ಬಿದ್ದಿದೆ. ಈ ದೇವಸ್ಥಾನವನ್ನು ಜಿಣೋದ್ಧಾರ ಮಾಡುವ ಸಂಕಲ್ಪಕ್ಕೆ ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳಿಂದ ಭೂಮಿ ಪೂಜೆ ಜರುಗಿತು.

ಕೃಷ್ಣ ಮೂರ್ತಿ ಉಡುಪ ಮತ್ತು ಅರ್ಚಕ ಪ್ರಭಾಕರ ಚಡಗ ಪೂಜಾ ಕಾರ್ಯ ನೆರವೇರಿಸಿದರು. ಊರ ಜನರು ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೇಜಾವರ ಶ್ರೀಗಳು, ಪುರಾತನ ದೇವಸ್ಥಾನಗಳ ಪುನರುತ್ಥಾನ ಮಾಡಲು ಜನ್ಮಾಂತರದ ಪುಣ್ಯ ಬೇಕು. ಹಲವಾರು ವರ್ಷಗಳಿಂದ ದೇವಾಲಯದ ಅಸ್ತಿತ್ವ ಇಲ್ಲದ ಊರಿಗೆ ಹೊಸ ದೇವಾಲಯ ನಿರ್ಮಾಣ ಮಾಡಲು ಅವಕಾಶ ಸಿಕ್ಕಿದ್ದು ನಮಗೆಲ್ಲರ ಪುಣ್ಯ ಎಂದರು.

ಜಿಣೋದ್ಧಾರ ಸಮಿತಿಯ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು. ಊರ ಪರವೂರ ಗಣ್ಯರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

24/02/2022 12:43 pm

Cinque Terre

4.61 K

Cinque Terre

0

ಸಂಬಂಧಿತ ಸುದ್ದಿ